370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರಕ್ಕೆ ದೊಡ್ಡ ಗಿಫ್ಟ್..!

370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಬಿಗ್ ಗಿಫ್ಟ್ ಕೊಟ್ಟಿದೆ. ಭಾರತದ ಅತೀ ವೇಗದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಗೃಹಸಚಿವ ಅಮಿತ್ ಶಾ ಚಾಲನೆ ಕೊಟ್ಟಿದ್ದಾರೆ. ದೆಹಲಿ ಮತ್ತು ಜಮ್ಮು ಕಾಶ್ಮೀರದ ನಡುವೆ ಈ ರೈಲು ಸಂಚರಿಸಲಿದ್ದು, ಪ್ರಯಾಣದ ಅವಧಿ 12ರಿಂದ 8 ಗಂಟೆಗೆ ಇಳಿಕೆಯಾಗಲಿದೆ. ದೆಹಲಿಯಿಂದ ಹೊರಡೋ ಈ ರೈಲು ಜಮ್ಮು ಕಾಶ್ಮೀರದ ಕತ್ರಾದ ವೈಷ್ಣೋದೇವಿ ಮಂದಿರದವರೆಗೆ ಚಲಿಸಲಿದೆ. ಶನಿವಾರದಿಂದ ಸಂಚಾರ ಆರಂಭವಾಗಲಿದ್ದು, ಈಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಇದು ದೇಶದ 2ನೇ ಭಾರತ್ ಎಕ್ಸ್‍ಪ್ರೆಸ್ ರೈಲು ಆಗಿದ್ದು, ಮೊದಲ ರೈಲು ದೆಹಲಿ ಮತ್ತು ವಾರಾಣಸಿ ನಡುವೆ ಸಂಚರಿಸುತ್ತಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರದ ಅಭಿವೃದ್ಧಿ ಮತ್ತು ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ರೈಲ್ವೆ ಸೇವೆ ಪೂರಕವಾಗಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಅಭಿವೃದ್ಧಿಯ ಮಾರ್ಗಕ್ಕೆ ಅಡ್ಡಿಯಾಗಿತ್ತು. ಮುಂದಿನ 10 ವರ್ಷಗಳಲ್ಲಿ ಜಮ್ಮು ಕಾಶ್ಮೀರ ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಗೆ ಸೇರಲಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಾಥ್ ನೀಡಿದ್ರು.

Contact Us for Advertisement

Leave a Reply