ವಿಪಕ್ಷ ನಾಯಕನಿಲ್ಲದೇ ವಿಧಾನಸಭೆ ಅಧಿವೇಶನ..!

ದಸರಾ ಮುಗಿದ ಬಳಿಕ ಆಗಸ್ಟ್ 10ರಿಂದ 3 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ. ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಅಧಿವೇಶನ ಕೇವಲ ಬಜೆಟ್‍ಗೆ ಮಾತ್ರವೇ ಸೀಮಿತವಾಗಿರಲಿದೆ. ಆದ್ರೆ ಇನ್ನೂ ಕೂಡ ಕಾಂಗ್ರೆಸ್ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಅಲ್ಲದೆ ಅಧಿವೇಶನದ ಒಳಗೆ ಪ್ರತಿಪಕ್ಷ ನಾಯಕನನ್ನು ನೇಮಿಸುವಲ್ಲಿಯೂ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಯೋ ಸಾಧ್ಯತೆ ಇದೆ.

ಮತ್ತೊಂದ್ಕಡೆ ವಿವಿಧ ವಿಷಯಗಳನ್ನು ಮುಂದಿಟ್ಟು ಬಿಜೆಪಿ ಸರ್ಕಾರವನ್ನು ಹಣಿಯಲು ಮಾಜಿ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ. ನೆರೆ ಪರಿಸ್ಥಿತಿ, ಅನುದಾನ ಕಡಿತದ ವಿಚಾರ ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಲು ತಂತ್ರ ಹೂಡಿದ್ದಾರೆ. ಇದಕ್ಕಾಗಿಯೇ ಅಕ್ಟೋಬರ್ 9ರಂದು ಶಾಸಕಾಂಗ ಸಭೆ ಕರೆದಿದ್ದಾರೆ.

Contact Us for Advertisement

Leave a Reply