ಏನಿದು ಪ್ರತ್ಯೇಕ ವಿಜಯನಗರ ಹೋರಾಟ..? ಜಿಲ್ಲೆ ವಿಭಜನೆಯಿಂದ ಏನು ಲಾಭ..?

ಹಾಯ್ ಫ್ರೆಂಡ್ಸ್. ಗಡಿನಾಡು, ಗಣಿನಾಡು ಬಳ್ಳಾರಿಯನ್ನು 2 ಪೀಸ್ ಮಾಡಿ ಹೊಸ ವಿಜಯನಗರ ಜಿಲ್ಲೆಯನ್ನು ಸೃಷ್ಟಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ರೆಡ್ಡಿ ಬ್ರದರ್ಸ್ ಮತ್ತು ಕೆಲವರು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾದ್ರೆ ಬಳ್ಳಾರಿ ಜಿಲ್ಲೆ ಯ ಇತಿಹಾಸ ಏನು? ಹೊಸದಾಗಿ ರಚನೆಯಾಗುವ ವಿಜಯನಗರದ ರಾಜ ವೈಭವದ ಹಳೆಯ ಕಥೆಯೇನು? ಹೊಸ ಜಿಲ್ಲೆ ಬಿಡಿಕೆ ಹಿಂದಿರುವ ರೋಚಕ ಸತ್ಯ ಕತೆ ಏನು? ಎಲ್ಲಾ ವೆರಿವೆರಿ ಇಂಟರೆಸ್ಟಿಂಗ್ ಹಾಗೂ ಅಷ್ಟೇ ಉಪಯುಕ್ತವಾದ ಮಾಹಿತಿಯನ್ನು ನಾವು ಕೊಡ್ತೀವಿ.. ಫುಲ್ ಓದಿ..

ಇಂದಿನ ಗಣಿ ನಾಡು ಹಿಂದೆ ಆಗಿತ್ತು ಚಿನ್ನದ ಬೀಡು!
ಹೌದು ಫ್ರೆಂಡ್ಸ್. ಸದ್ಯ ಅಖಂಡ ಬಳ್ಳಾರಿ ಇರುವ ಇದಿಷ್ಟೂ ಜಾಗ ಗಣಿನಾಡು, ಗಡಿನಾಡು ಅಂತ ಕರೆಸಿಕೊಳ್ಳುತ್ತದೆ. ಅಭಿವೃದ್ಧಿ ಅನ್ನೋದು ಇಲ್ಲಿ ಕೇಳೋದೇ ಬೇಡ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿವೆ ಜಿಲ್ಲೆಯ ತಾಲೂಕುಗಳು. ಆದರೆ ಒಂದಾನೊಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಇದೇ ಜಾಗದಲ್ಲಿ ವಿಜಯನಗರ ಸಾಮ್ರಾಜ್ಯ ಇತ್ತು. ಇಡೀ ದಕ್ಷಿಣ ಭಾರತವನ್ನು ಆವರಿಸಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಈಗಿನ ಬಳ್ಳಾರಿಯ ಹೊಸಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಈಗಿನ ಹಂಪಿ ಪ್ರದೇಶದಲ್ಲಿತ್ತು. ಇದನ್ನು ಬಜಾ ನಗರ ಅಂತಾನೆ ಕರೆಯಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳಲ್ಲಿ ಇದೇ ಹಂಪಿಯಲ್ಲಿ ಚಿನ್ನವನ್ನು ರಸ್ತೆಬದಿಯಲ್ಲಿ ಮಾರುವಷ್ಟು ಸಮೃದ್ಧವಾಗಿತ್ತು ಅಂತಾರೆ ಇತಿಹಾಸಕಾರರು. ಶಾತವಾಹನರು, ಕಲ್ಯಾಣಿಯ ಚಾಲುಕ್ಯರು, ಕದಂಬರು, ಸೇವುಣರು, ಹೊಯ್ಸಳರು ಈ ಪುಣ್ಯಭೂಮಿಯಲ್ಲಿ ಆಳಿ ಮೆರೆದು ಹೋಗಿದ್ದಾರೆ.

ಬ್ರಿಟಿಷರು ನಿರ್ಮಾಣ ಮಾಡಿದರು ಬಳ್ಳಾರಿ ಜಿಲ್ಲೆ!
ಆಗ ಇದ್ದವು 20 ತಾಲೂಕುಗಳು!
ಭಾರತದಲ್ಲಿ ಬ್ರಿಟಿಷರ ಅಬ್ಬರ ಶುರುವಾದ ಬಳಿಕ 1802ರಲ್ಲಿ ಬಳ್ಳಾರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು. ಆಗ ಇದರ ವ್ಯಾಪ್ತಿಯಲ್ಲಿ 20 ತಾಲೂಕು ಗಳಿದ್ದವು. ಆದರೆ ಸ್ವಾತಂತ್ರ್ಯ ಬಂದ ಬಳಿಕ ಭಾಷೆ ಆಧಾರದಲ್ಲಿ ರಾಜ್ಯಗಳ ರಚನೆ ಮಾಡಿದಾಗ ಅರ್ಧಕರ್ಧ ಬಳ್ಳಾರಿ ಜಿಲ್ಲೆಯ ತಾಲೂಕುಗಳು ಆಂಧ್ರಪ್ರದೇಶಕ್ಕೆ ಸೇರಿಬಿಟ್ಟವು. ಹೀಗಾಗಿ ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕುಗಳು ಇವೆ.

ವಿಜಯನಗರ ಜಿಲ್ಲೆ ಮಾಡಿದರೆ ಏನಾಗುತ್ತೆ!?
ವಿಜಯನಗರ ಜಿಲ್ಲೆ ಮಾಡಿದ್ರೆ ಇದರ ವ್ಯಾಪ್ತಿಗೆ 6 ತಾಲೂಕುಗಳು ಬರುತ್ತವೆ. ಈ ಮ್ಯಾಪ್ ನಲ್ಲಿ ನೋಡಿ. ಬಳ್ಳಾರಿ ಈ ರೀತಿ ಡಿವೈಡ್ ಆಗುತ್ತದೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ ಇದೆಲ್ಲವೂ, ಅಂದ್ರೆ ಒಟ್ಟು 6 ತಾಲೂಕುಗಳು ವಿಜಯನಗರ ಜಿಲ್ಲೆಗೆ ಸೇರುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರಗೋಡು, ಸಿರಗುಪ್ಪ, ಸಂಡೂರು ಮತ್ತು ಕೂಡ್ಲಿಗಿ ಈ 5 ತಾಲೂಕುಗಳು ಉಳಿದುಕೊಳ್ಳುತ್ತವೆ.

ವಿಜಯನಗರ ಜಿಲ್ಲೆಗೆ ಭಾರೀ ಲಾಭ!
ಮೆದು ಕಬ್ಬಿಣ ಕಾರ್ಖಾನೆ, ಸಕ್ಕರೆ ಕಾರ್ಖಾನೆಗಳು, ರೈಲ್ವೆ ಜಂಕ್ಷನ್, ಸಾಕಷ್ಟು ಸರ್ಕಾರಿ ಜಾಗ ಮತ್ತು ಬಂಗಲೆಗಳು, ವಿಶ್ವಪ್ರಸಿದ್ಧ ಯುನೆಸ್ಕೋ ವಿಶ್ವ ಪರಂಪರೆಯ ಹಂಪಿ ಪ್ರವಾಸಿತಾಣ, ಹಂಪಿ ಕನ್ನಡ ವಿಶ್ವವಿದ್ಯಾಲಯ ಇವೆಲ್ಲವೂ ಹೊಸದಾಗಿ ರಚನೆಯಾಗುವ ವಿಜಯನಗರ ಜಿಲ್ಲೆಗೆ ಸಿಕ್ಕಿಬಿಡುತ್ತವೆ. ಇದರಿಂದ ವಿಜಯನಗರಕ್ಕೆ ಭಾರೀ ಲಾಭ ಆಗುತ್ತದೆ.

ವಿಜಯನಗರ ಜಿಲ್ಲೆಯ ಬೇಡಿಕೆ ಯಾಕೆ?
ಬಳ್ಳಾರಿ ಸಾಕಷ್ಟು ದೊಡ್ಡ ಜಿಲ್ಲೆ. ಕರ್ನಾಟಕದಲ್ಲಿಯೇ ಬೆಂಗಳೂರನ್ನ ಹೊರತುಪಡಿಸಿದರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು. ಜೊತೆಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ ಕೆಲವೊಂದು ತಾಲೂಕು ಮತ್ತು ಗ್ರಾಮಗಳಿಂದ ಜಿಲ್ಲಾಕೇಂದ್ರಕ್ಕೆ ಬರಬೇಕು ಅಂದರೆ 150ರಿಂದ 200 ಕಿಲೋಮೀಟರ್ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಆಡಳಿತಾತ್ಮಕ ಕೆಲಸಗಳಿಗೆ ಜನರ ಓಡಾಟಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಇದೇ ಕಾರಣಕ್ಕೆ ರಾಜಕಾರಣಿಗಳು ಮತ್ತು ಮಠಾಧೀಶರು ಪ್ರತ್ಯೇಕ ಜಿಲ್ಲೆಗಾಗಿ ಧ್ವನಿಯೆತ್ತುತ್ತಾ ಬಂದಿದ್ದರು.

ವಿರೋಧ ಯಾಕೆ?
ಇಲ್ಲಿ ವಿರೋಧ ಹೆಚ್ಚುಕಮ್ಮಿ ರಾಜಕೀಯ ವಿರೋಧ. ಜಿಲ್ಲೆ ಡಿವೈಡ್ ಆದರೆ ಈಗಾಗಲೇ ವೀಕ್ ಆಗಿರುವ ರೆಡ್ಡಿ ಬ್ರದರ್ಸ್ ಶಕ್ತಿ ಮತ್ತಷ್ಟು ಕುಂದುತ್ತದೆ. ಜೊತೆಗೆ ಪ್ರಮುಖ ಪ್ರವಾಸಿ ತಾಣಗಳು, ಕೈಗಾರಿಕೆಗಳು ವಿಜಯನಗರ ಜಿಲ್ಲೆಗೆ ಹೋಗುವುದರಿಂದ ಬಳ್ಳಾರಿ ಖಾಲಿ ಖಾಲಿ ಉಳಿದುಕೊಳ್ಳುತ್ತದೆ ಅನ್ನೋದು ಕೆಲವರ ವಿರೋಧಕ್ಕೆ ಕಾರಣ.

Contact Us for Advertisement

Leave a Reply