masthmagaa.com:

ಸನ್​ರೈಸರ್ಸ್​ ಹೈದ್ರಾಬಾದ್ ತಂಡದ ನಾಯಕ ಡೇವಿಡ್​ ವಾರ್ನರ್ ಐಪಿಎಲ್​ನಲ್ಲಿ 5,000 ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಅನ್ನೋ ದಾಖಲೆ ಬರೆದಿದ್ದಾರೆ. ಇವತ್ತು ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಈ ರೆಕಾರ್ಡ್ ಮಾಡಿದ್ರು. ಭಾರತೀಯ ಆಟಗಾರರನ್ನೂ ಸೇರಿಸಿಕೊಂಡ್ರೆ ಈ ದಾಖಲೆ ಬರೆದ 4ನೇ ಆಟಗಾರ ವಾರ್ನರ್ ಆಗಿದ್ದಾರೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ಇರೋದು ವಿರಾಟ್ ಕೊಹ್ಲಿ ಹೆಸರಲ್ಲಿ.  ಕೊಹ್ಲಿ ಇದುವರೆಗೆ 5,759 ರನ್ ಸಿಡಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಸುರೇಶ್ ರೈನಾ (5,368 ರನ್) ಮತ್ತು ರೋಹಿತ್ ಶರ್ಮಾ (5,149 ರನ್) ಇದ್ದಾರೆ. ಭಾರತದ ಈ ಮೂವರು ಬ್ಯಾಟ್ಸ್​ಮನ್​ಗಳು ಮಾತ್ರ 5,000 ಗೆರೆ ದಾಟಿದ್ದಾರೆ. ಈ ಸಾಲಿಗೆ ಈಗ ಡೇವಿಡ್ ವಾರ್ನರ್ ಸೇರಿದ್ದಾರೆ. ಈ ನಾಲ್ವರ ಪೈಕಿ ಕಡಿಮೆ ಮ್ಯಾಚ್​ಗಳಲ್ಲಿ 5,000 ರನ್ ಪೂರೈಸಿರೋದು ಕೂಡ ವಾರ್ನರ್. ಇವರು 135 ಇನ್ನಿಂಗ್ಸ್​ಗಳಲ್ಲಿ ಈ ದಾಖಲೆ ಮಾಡಿದ್ದಾರೆ. ಉಳಿದವರು ಹೆಚ್ಚು ಮ್ಯಾಚ್​ಗಳನ್ನು ಆಡಿರೋದು ಗಮನಾರ್ಹ.

-masthmagaa.com

Contact Us for Advertisement

Leave a Reply