ಹೆಲಿಕಾಪ್ಟರ್ ಅವಶೇಷ ಸ್ಥಳಾಂತರಿಸಿದ ಹೆಲಿಕಾಪ್ಟರ್..!

masthmagaa.com:

ಉತ್ತರಾಖಂಡ್: 2018ರಲ್ಲಿ ಕೇದಾರನಾಥ ದೇವಾಲಯದ ಬಳಿ ಅಗ್ನಿ ಅವಘಡಕ್ಕೆ ತುತ್ತಾಗಿದ್ದ ಭಾರತೀಯ ವಾಯುಸೇನೆಯ ಎಮ್‌ಐ -17 ಹೆಲಿಕಾಪ್ಟರ್‌ ನ ಅವಶೇಷಗಳನ್ನು ಇಂದು ಚಿನೂಕ್‌ ಹೆಲಿಕಾಪ್ಟರ್‌ ಮೂಲಕ ಹತ್ತಿರದ ವಾಯುನೆಲೆಗೆ ಕೊಂಡೊಯ್ಯಲಾಯಿತು. ಕಳೆದ 15 ದಿನಗಳಿಂದ ಈ ಕುರಿತು ಸಿದ್ಧತೆ ನಡೆಯುತ್ತಿದ್ದು, ಇತ್ತೀಚೆಗಷ್ಟೇ ವಾಯುಸೇನೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವಾಯುಸೇನೆಯ ಎಮ್‌ಐ -17 ಹೆಲಿಕಾಪ್ಟರ್‌ ಕೇದಾರನಾಥ ದೇವಾಲಯದ ಹಿಂಬದಿ ಇರುವ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್‌ ವೇಳೆ ಅವಘಡ ಸಂಭವಿಸಿ, ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು.

-masthmagaa.com

Contact Us for Advertisement

Leave a Reply