ನಾನ್ ಲಸಿಕೆ ಹಾಕ್ಕೊಳ್ಳಲ್ಲ ಎಂದ ಆ ವ್ಯಕ್ತಿ ಮಾಡಿದ್ದೇನು?

masthmagaa.com:

ಕೊರೋನಾ ಲಸಿಕೆ ಅಭಿಯಾನ ಶುರುವಾದಾಗಿನಿಂದ ಅದಕ್ಕೆ ಸಂಬಂಧಿಸಿದಂತೆ ಚಿತ್ರವಿಚಿತ್ರ ವಿಡಿಯೋಗಳು ವೈರಲ್​ ಆಗ್ತಾನೇ ಇವೆ. ಇದೀಗ ಅಂಥದ್ದೇ ಎರಡು ವಿಡಿಯೋಗಳು ವೈರಲ್​ ಆಗಿವೆ. ಉತ್ತರ ಪ್ರದೇಶದ ಬಲಿಯಾ ಎಂಬಲ್ಲಿ ಆರೋಗ್ಯ ಸಂಬಂಧಿ ಯಾರೆಲ್ಲಾ ಲಸಿಕೆ ಹಾಕ್ಕೊಂಡಿಲ್ವೋ ಅವರನ್ನ ಹುಡುಕಿಕೊಂಡು ಮನೆ ಮೆನೆಗೆ ಹೋಗಿದ್ರು. ಈ ವೇಳೆ ಬೋಟ್​​ನಲ್ಲಿದ್ದ ವ್ಯಕ್ತಿಯೊಬ್ಬ ನಾನ್​ ಲಸಿಕೆ ಹಾಕ್ಕೊಳ್ಳಲ್ಲ ಅಂತ ಸಿಬ್ಬಂದಿ ಮೇಲೆಯೇ ಎಗರಿದ್ದಾನೆ. ಓರ್ವ ಸಿಬ್ಬಂದಿಯನ್ನ ನೆಲಕ್ಕೆ ಕೆಡವಿ, ನದಿಗೆ ತಳ್ಳಲು ಯತ್ನಿಸಿದ್ದಾನೆ. ಬಲಿಯಾದ ಮತ್ತೊಂದ್ಕಡೆ ವ್ಯಕ್ತಿಯೊಬ್ಬ ಕೊರೋನಾ ಲಸಿಕೆ ಬೇಡ ಅಂತ ಮರ ಹತ್ತಿ ಕೂತಿದ್ದ. ಇಂಟರೆಸ್ಟಿಂಗ್ ಅಂದ್ರೆ ಇಬ್ಬರನ್ನ ಕೂಡ ಮನವೊಲಿಸಿ ಕೊನೆಗೂ ಅಧಿಕಾರಿಗಳು ಲಸಿಕೆ ಚುಚ್ಚಿ ಹೋಗಿದ್ದಾರೆ.

-masthmagaa.com

Contact Us for Advertisement

Leave a Reply