ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ಏರ್​​ಸ್ಟ್ರೈಕ್! 254 ಮಂದಿ ಹತ್ಯೆ

masthmagaa.com:

ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಝೇರೈ ಜಿಲ್ಲೆಯಲ್ಲಿ ಹತ್ತಾರು ಉಗ್ರರನ್ನು ಹೊಡೆದುರುಳಿಸಲಾಗಿದೆ. ತಾಲಿಬಾನಿಗಳ ಅಡಗುದಾಣಗಳ ಮೇಲೆ ಏರ್​​ಸ್ಟ್ರೈಕ್ ಮಾಡಿರೋ ವಿಡಿಯೋವೊಂದನ್ನು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ. ಕಳೆದ 24 ಗಂಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 254 ಉಗ್ರರು ಪ್ರಾಣ ಕಳೆದುಕೊಂಡಿದ್ದು, 97ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಅಂತ ಸಚಿವಾಲಯ ತಿಳಿಸಿದೆ. ಇನ್ನು ನಿನ್ನೆ ರಾತ್ರಿ ಕಂದಹಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಮೂರ್ಮೂರು ರಾಕೆಟ್ ದಾಳಿ ನಡೆದಿದೆ. ಇದ್ರಲ್ಲಿ ಎರಡು ರಾಕೆಟ್​​ಗಳು ರನ್​​ವೇಗೆ ಬಂದು ಅಪ್ಪಳಿಸಿದ್ದು, ಏರ್​ಪೋರ್ಟ್​​ನಿಂದ ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ. ತಾಲಿಬಾನಿಗಳು ದಿನೇ ದಿನೇ ಹೊಸ ಹೊಸ ಪ್ರದೇಶಗಳನ್ನು ವಶಕ್ಕೆ ಪಡೆಯುತ್ತಿದೆ. ಹೇರಾತ್​, ಲಷ್ಕರ್ ಗಾಹ್​​ ಮತ್ತು ಕಂದಹಾರ್​​ನ್ನು ಕಂಪ್ಲೀಟಾಗಿ ತಾಲಿಬಾನಿಗಳು ಸುತ್ತುವರಿದಿದ್ದು, ಇದ್ರ ನಡುವೆಯೇ ಈ ದಾಳಿ ನಡೆದಿದೆ.

-masthmagaa.com

Contact Us for Advertisement

Leave a Reply