ನ್ಯಾಷನಲ್ ಶೂಟರ್ ಮನೆಯಲ್ಲಿ ರಾಶಿ ರಾಶಿ ಶಸ್ತ್ರಾಸ್ತ್ರ..!

ದೆಹಲಿ: ಹಲವು ವರ್ಷಗಳಿಂದ ಜೈಲಿನಲ್ಲಿ ಬಂದಿಯಾಗಿರುವ ಬಾಹುಬಲಿ ಮುಖ್ತಾರ್ ಅಬ್ಬಾಸ್  ಅವರ ಪುತ್ರ ಅಬ್ಬಾಸ್ ಅನ್ಸಾರಿಯವರ ಮನೆಯಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಉತ್ತರ ಪ್ರದೇಶ ಕ್ರೈಂ ಬ್ರಾಂಚ್ ಮತ್ತು ದೆಹಲಿ ಪೊಲೀಸರು ಒಟ್ಟಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಯ ಬಸಂತ್ ಕುಂಜ್​​ನಲ್ಲಿರುವ ಅಬ್ಬಾಸ್ ಅನ್ಸಾರಿ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಿದೇಶಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇಟಲಿ, ಆಸ್ಟ್ರಿಯಾ, ಸ್ಲೋವೇನಿಯಾ ನಿರ್ಮಿತ ರಿವಾಲ್ವರ್​​ಗಳು, ಇಟಲಿ ಮತ್ತು ಸ್ಲೋವೇನಿಯಾದಲ್ಲಿ ತಯಾರಾದ ಬಂದೂಕುಗಳು ಸೇರಿದಂತೆ ವಿವಿಧ ದೇಶಗಳಲ್ಲಿ ನಿರ್ಮಿತವಾದ ಬಂದೂಕು ಮತ್ತು ರಿವಾಲ್ವರ್​ಗಳು ಪತ್ತೆಯಾಗಿವೆ. ಜೊತೆಗೆ ಇವುಗಳಿಗೆ ಬೇಕಾದ ಗುಂಡುಗಳು ಸಹ ಸಾವಿರಾರು ಸಂಖ್ಯೆಯಲ್ಲಿ ಪತ್ತೆಯಾಗಿವೆ. ಇವುಗಳನ್ನು ಕಂಡು ಸ್ವತಃ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಅಕ್ಟೋಬರ್ 12ರಂದು ಉತ್ತರ ಪ್ರದೇಶದಲ್ಲಿ ಒಂದು ಎಫ್​ಐಆರ್ ದಾಖಲಾಗಿತ್ತು. ಒಂದೇ ಲೈಸನ್ಸ್​ನಲ್ಲಿ ಹಲವಾರು ಆಯುಧಗಳನ್ನು ಖರೀದಿಸಿದ ಬಗ್ಗೆ ಕೇಸ್​ನಲ್ಲಿ ಉಲ್ಲೇಖಿಸಲಾಗಿತ್ತು. ಸದ್ಯ ನ್ಯಾಷನಲ್ ಶೂಟರ್ ಆಗಿರುವ ಅಬ್ಬಾಸ್ ಅನ್ಸಾರಿ ಬಂಧನ ಪ್ರಕ್ರಿಯೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ದೇಶದ 10 ಟಾಪ್​​ ಶಾರ್ಪ್​ ಶೂಟರ್​ಗಳಲ್ಲಿ ಅಬ್ಬಾಸ್ ಅನ್ಸಾರಿ ಮೊದಲಿಗರಾಗಿದ್ದಾರೆ. ಈಗಾಗಲೇ ನ್ಯಾಷನಲ್ ಚಾಂಪಿಯನ್ ಆಗಿರೋ ಇವರು ಹಲವಾರು ಪದಕಗಳನ್ನೂ ಗೆದ್ದಿದ್ದಾರೆ.

Contact Us for Advertisement

Leave a Reply