ರಾಜ್ಯದಲ್ಲಿ ಮೂರುನಾಲ್ಕು ದಿನಗಳಲ್ಲಿ ಕಡಿಮೆ ಆಗಲಿದೆ ವರುಣನ ಅಬ್ಬರ..

masthmagaa.com:

ಕಳೆದ ಹಲವು ದಿನಗಳಿಂದ ಅಬ್ಬರಿಸಿದ್ದ ಮಳೆರಾಯ ರಾಜ್ಯದಲ್ಲಿ ಶಾಂತವಾಗ್ತಿದ್ದಾನೆ. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಆದ್ರೆ ಉತ್ತರ ಭಾರತದಲ್ಲಿ ಮಳೆಯಬ್ಬರ ತುಂಬಾ ಜೋರಾಗಿದೆ. ದೆಹಲಿಯಲ್ಲಿ ಭಾರಿ ಮಳೆಗೆ ರಸ್ತೆಗಳೆಲ್ಲಾ ನೀರಲ್ಲಿ ಮುಳುಗಿಹೋಗಿವೆ. ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಂದಿನ 4 ದಿನಗಳ ಕಾಲ ಉತ್ತರ ಮತ್ತು ಮಧ್ಯಭಾರತದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply