ಲಸಿಕೆ ಸರ್ಟಿಫಿಕೇಟ್​​ನಲ್ಲಿ ಮೋದಿ ಫೋಟೋ: ಟಿಎಂಸಿ ಕೆಂಡ

masthmagaa.com:

ಪಶ್ಚಿಮ ಬಂಗಾಳ: ದೇಶದಲ್ಲಿ 2ನೇ ಹಂತದ ಲಸಿಕೆ ಅಭಿಯಾನ ನಡೀತಾ ಇದೆ. ಲಸಿಕೆ ಹಾಕಿಸಿಕೊಂಡವರಿಗೆ ಒಂದು ಸರ್ಟಿಫಿಕೇಟ್ ನೀಡಲಾಗುತ್ತೆ. ಆರೋಗ್ಯ ಇಲಾಖೆಯಿಂದ ನೀಡಲಾಗುವ ಆ ಸರ್ಟಿಫಿಕೇಟ್​​ನಲ್ಲಿ ಪ್ರಧಾನಿ ಮೋದಿಯವರ ಒಂದು ಫೋಟೋ ಕೂಡ ಇದೆ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ, ಪ್ರಧಾನಿ ಮೋದಿಯವರು ಸರ್ಕಾರಿ ಸಂಸ್ಥೆಗಳನ್ನು ಸ್ವಂತ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಈ ಮೂಲಕ ವೈದ್ಯರು, ನರ್ಸ್​ಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಿಗಬೇಕಾದ ಹೊಗಳಿಕೆಯನ್ನು ತಾವು ಕದಿಯುತ್ತಿದ್ದಾರೆ ಅಂತ ಕಿಡಿಕಾರಿದೆ.

ಸರ್ಟಿಫಿಕೇಟ್​​ನಲ್ಲಿ ಪ್ರಧಾನಿ ಮೋದಿ ಫೋಟೋ ಜೊತೆಗೆ ಸಂದೇಶ ಕೂಡ ಹಾಕಲಾಗಿದೆ. ಈ ಮೂಲಕ ತೆರಿಗೆದಾರರ ದುಡ್ಡಲ್ಲಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ತಡೆಯಬೇಕು ಅಂತ ಟಿಎಂಸಿ ನಾಯಕ ಡೆರಿಕ್ ಒಬ್ರಿಯಾನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply