ಜಾತಿಯನ್ನ ದೇವರು ಸೃಷ್ಟಿಸಿಲ್ಲ, ಪಂಡಿತರು ಸೃಷ್ಟಿಸಿದ್ದಾರೆ: ಮೋಹನ್‌ ಭಾಗವತ್

masthmagaa.com:

ರಾಜ್ಯದಲ್ಲಿ ಜಾತಿ ವಿಚಾರ ಚರ್ಚೆಯಾಗ್ತಿರೋ ಹೊತ್ತಲ್ಲೇ ಅತ್ತ RSSನ ಮುಖ್ಯಸ್ಥ ಮೋಹನ್‌ ಭಾಗವತ್‌ ದೇಶದಲ್ಲಿರುವ ಜಾತೀಯತೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ, ಪುರೋಹಿತರಿಂದ ಅಂತ ಮೋಹನ್‌ ಭಾಗವತ್‌ ಹೇಳಿದ್ದಾರೆ. ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಒಂದ್ರಲ್ಲಿ ಮಾತಾಡಿದ ಭಾಗವತ್‌, ದೇವರು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರ್ತಾನೆ. ಸೋ ಹೆಸರು, ರೂಪ, ಸಾಮರ್ಥ್ಯ ಮತ್ತು ಗೌರವ ಏನೇ ಇರಲಿ ದೇವರ ಮುಂದೆ ಎಲ್ಲರೂ ಸಮಾನರು. ದೇವರ ದೃಷ್ಟಿಯಲ್ಲಿ ಯಾರು ಕೀಳು ಅಲ್ಲ ಮೇಲು ಅಲ್ಲ. ಆದ್ರೆ ಶಾಸ್ತ್ರಗಳ ಆಧಾರದ ಮೇಲೆ ಪಂಡಿತರು ಜಾತಿಗಳನ್ನ ಸೃಷ್ಟಿ ಮಾಡ್ತಾರೆ, ಅದು ತಪ್ಪು. ಜಾತಿ ಶ್ರೇಷ್ಠತೆಯ ಭ್ರಮೆಯಿಂದ ನಾವು ದಾರಿ ತಪ್ಪುತ್ತಿದ್ದು, ಈ ಭ್ರಮೆಯಿಂದ ಹೊರಬರಬೇಕಿದೆ ಅಂತ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply