masthmagaa.com:

ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಬಗ್ಗೆ ಸಾಕಷ್ಟು ಚರ್ಚೆ ನಡೀತಿರುವಾಗಲೇ, ಭಾರತೀಯ ಬಳಕೆದಾರರನ್ನ ವಾಟ್ಸಾಪ್ ಕಂಪನಿ​ ಡಿಫ್ರೆಂಟ್​ ಆಗಿ ಟ್ರೀಟ್ ಮಾಡ್ತಿದೆ. ಯುರೋಪಿನ ಬಳಕೆದಾರರಕ್ಕಿಂತ ಭಿನ್ನವಾಗಿ ನೋಡ್ತಿದೆ ಅಂತ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ಗೆ ಹೇಳಿದೆ. ವಾಟ್ಸಾಪ್​ ಹೊಸ ಪ್ರೈವಸಿ ಪಾಲಿಸಿಯನ್ನ ಬಳಕೆದಾರರು ಒಪ್ಪಿಕೊಳ್ಳಲೇ ಬೇಕು. ಅದನ್ನ ಒಪ್ಪಿಕೊಳ್ಳದೇ ಇರಲು ಆಪ್ಷನ್ನೇ​ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋರ್ಟ್​ಗೆ ಈ ರೀತಿ ಹೇಳಿದೆ. ಹೊಸ ಪ್ರೈವಸಿ ಪಾಲಿಸಿಯನ್ನ ಪ್ರಶ್ನಿಸಿ ವಕೀಲರೊಬ್ರು ಅರ್ಜಿ ಸಲ್ಲಿಸಿದ್ರು. ಅದರ ವಿಚಾರಣೆ ವೇಳೆ ಈ ರೀತಿ ಹೇಳಿದೆ.

ಅಂದ್ಹಾಗೆ ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಪ್ರಕಾರ, ಬಳಕೆದಾರರು ಅದನ್ನ ಒಪ್ಪಿಕೊಳ್ಳಬೇಕು ಅಥವಾ ಅಪ್ಲಿಕೇಶನ್​ನಿಂದ ಹೊರಬರಬೇಕು. ಆದ್ರೆ ಪಾಲಿಸಿಯನ್ನ ಒಪ್ಪಿಕೊಳ್ಳದೇ ವಾಟ್ಸಾಪ್​ನಲ್ಲಿ ಮುಂದುವರಿಯಲು ಅವಕಾಶವಿಲ್ಲ. ಹೊಸ ಪ್ರೈವಸಿ ಪಾಲಿಸಿ ಒಪ್ಪಿಕೊಂಡ್ರೆ, ಫೇಸ್​ಬುಕ್​ ಒಡೆತನದ ಅಥವಾ ಥರ್ಡ್​ ಪಾರ್ಟಿ ಅಪ್ಲಿಕೇಶನ್​ಗಳ ಜೊತೆ ನಿಮ್ಮ ಡೇಟಾ ಶೇರ್ ಮಾಡಲು ವಾಟ್ಸಾಪ್​ಗೆ ಅನುಮತಿ ಕೊಟ್ಟಂತಾಗುತ್ತೆ. ಆದ್ರೆ ಯುರೋಪಿನ ದೇಶಗಳಲ್ಲಿ ಹೀಗಿಲ್ಲ. ಇದೇ ಈಗ ವಿವಾದಕ್ಕೆ ಗುರಿಯಾಗಿದ್ದು, ವಾಟ್ಸಾಪ್ ಕಂಪನಿ ಭಾರತೀಯರನ್ನ ಯುರೋಪಿಯನ್ನರಿಗಿಂತ ಡಿಫ್ರೆಂಡ್​  ಆಗಿ ನೋಡ್ತಿದೆ ಅಂತ ಕೇಂದ್ರ ಸರ್ಕಾರ ಕೋರ್ಟ್​ಗೆ ಹೇಳಿದೆ.

-masthmagaa.com

Contact Us for Advertisement

Leave a Reply