ಮುಂದಿವೆ ಮತ್ತಷ್ಟು ಕಷ್ಟದ ದಿನಗಳು: ರಾಕೆಟ್​ ವೇಗದಲ್ಲಿ ಹೆಚ್ಚಾಗ್ತಿದೆ ಕಚ್ಚಾ ತೈಲ ಬೆಲೆ

masthmagaa.com:

ಪೆಟ್ರೋಲ್ ಮತ್ತು ಡೀಸೆಲ್ ರೇಟು ಕೆಲವೇ ದಿನಗಳಲ್ಲಿ ಶತಕ ಬಾರಿಸೋದು ಗ್ಯಾರಂಟಿ. ರಾಜಸ್ಥಾನ, ಮಧ್ಯಪ್ರದೇಶದ ಕೆಲವೊಂದು ನಗರಗಳಲ್ಲಿ ಪೆಟ್ರೋಲ್ ರೇಟು 100 ರೂಪಾಯಿ ದಾಟಿ ಹೋಗಿದೆ. ಪೆಟ್ರೋಲ್​-ಡೀಸೆಲ್​ ರೇಟು ಹೀಗೆ ಜಾಸ್ತಿ ಆಗ್ತಿರೋದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಯೇ ಕಾರಣ, ಅದನ್ನ ಕಮ್ಮಿ ಮಾಡ್ಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಅಟ್​ ದಿ ಸೇಮ್ ಟೈಂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್​ ಆಯಿಲ್ ಅಥವಾ ಕಚ್ಚಾ ತೈಲದ ಬೆಲೆ ಕೂಡ ಜಾಸ್ತಿಯಾಗ್ತಿದೆ. ಸದ್ಯ 1 ಬ್ಯಾರಲ್ ಕಚ್ಚಾ ತೈಲದ ಬೆಲೆ 65 ಅಮೆರಿಕನ್ ಡಾಲರ್ ದಾಟಿದೆ. ಶಾಕಿಂಗ್ ಏನಂದ್ರೆ ಮುಂದಿನ ಕೆಲ ತಿಂಗಳಲ್ಲಿ ಕಚ್ಚಾ ತೈಲದ ಬೆಲೆ 70ರಿಂದ 75 ಡಾಲರ್ ಆಗಲಿದೆ ಅಂತ ಗೋಲ್ಡ್​ಮನ್​ ಸ್ಯಾಚ್ಸ್​, ಮಾರ್ಗನ್​ ಸ್ಟಾನ್ಲೇ ಮತ್ತು ಬ್ಯಾಂಕ್ ಆಫ್ ಅಮೆರಿಕಗಳು ಅಂದಾಜಿಸಿವೆ. ಅಂದ್ರೆ ನಮಗೆ, ನಿಮಗೆ ಸಿಗ್ತಿರೋ ಪೆಟ್ರೋಲ್, ಡೀಸೆಲ್​ ರೇಟು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾಸ್ತಿಯಾಗಲಿದೆ ಅಂತರ್ಥ. ಇಷ್ಟೇ ಅಲ್ಲ ಮುಂದಿನ ಒಂದೂವರೆ-ಎರಡು ವರ್ಷದಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ದಾಟಿ ಹೋಗಲಿದೆ ಅಂತ ಸಾಕರ್ ಟ್ರೇಡಿಂಗ್ ಎಸ್​ಎ ಅಂದಾಜಿಸಿದೆ. ಅಂದ್ರೆ ಈಗಿರೋ ರೇಟಿಗಿಂತ 30-40 ಪರ್ಸೆಂಟ್ ಜಾಸ್ತಿ. ಕಚ್ಚಾ ತೈಲದ ಬೆಲೆ ಇಷ್ಟು ಪರ್ಸೆಂಟ್​ ಜಾಸ್ತಿ ಆಗುತ್ತೆ ಅಂದ್ರೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಅಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿಯಾಗಲಿದೆ. ಸೋ ಪೆಟ್ರೋಲ್, ಡೀಸೆಲ್ ವಿಚಾರದಲ್ಲಿ ಕಷ್ಟದ ದಿನಗಳು ಮುಂದಿವೆ ಅನ್ನೋದು ಇಲ್ಲಿ ಸ್ಪಷ್ಟ.

ಹಾಗಾದ್ರೆ ಕಚ್ಚಾ ತೈಲದ ರೇಟ್ ಏನಾದ್ರೂ 100 ಡಾಲರ್ ದಾಟಿದ್ರೆ ದಾಖಲೆನಾ? ಅಲ್ಲ.. ಈ ಹಿಂದೆ 2008ರಲ್ಲಿ ಪ್ರತಿ ಲೀಟರ್​​ ಕಚ್ಚಾ ತೈಲದ ಬೆಲೆ 140-150 ಡಾಲರ್ ದಾಟಿತ್ತು. ಅದೇ ಈವರೆಗಿನ ಹೈಯೆಸ್ಟ್. ಆಮೇಲೆ ಏರಿಳಿತ ಆಗ್ತಾನೆ ಇತ್ತು. ಕಳೆದ ವರ್ಷ ಕೊರೋನಾ ಹಾವಳಿ ಇಟ್ಟಾಗ ವಿವಿಧ ದೇಶಗಳಲ್ಲಿ ಲಾಕ್​ಡೌನ್​ ಹೇರಿದ್ರಲಾ ಆಗ ಪೆಟ್ರೋಲ್​, ಡೀಸೆಲ್​ಗೆ ಬೇಡಿಕೆ ಕಮ್ಮಿಯಾಗಿ ಒಂದು ಬ್ಯಾರಲ್​ ಕಚ್ಚಾ ತೈಲದ ಬೆಲೆ 20 ಡಾಲರ್​ಗೆ ಇಳಿದಿತ್ತು. ಈಗ ಎಲ್ಲವೂ ಓಪನ್ ಅಪ್ ಆಗ್ತಿದೆ. ಪೆಟ್ರೋಲ್, ಡೀಸೆಲ್​ಗೆ ಬೇಡಿಕೆ ಹೆಚ್ಚಾಗಿದೆ.. ಪೂರೈಕೆ ಕಮ್ಮಿಯಾಗಿದೆ. ಸೋ ರೇಟು ಕೂಡ ರಾಕೆಟ್​ ವೇಗದಲ್ಲಿ ಏರಿಕೆಯಾಗ್ತಾ ಇದೆ.

-masthmagaa.com

Contact Us for Advertisement

Leave a Reply