masthmagaa.com:

ದೇಶದಲ್ಲಿ ಇದುವರೆಗೆ ಕೊರೋನಾ ಲಸಿಕೆ ಹಾಕಿಸಿಕೊಂಡವರಲ್ಲಿ 580 ಜನರಿಗೆ ಅಡ್ಡಪರಿಣಾಮ ಕಾಣಿಸಿಕೊಂಡಿದೆ. ಜೊತೆಗೆ ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ರೂ ಅವರ ಸಾವಿಗೂ ಕೊರೋನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಅಂತ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಇದರ ನಡುವೆ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್​’ ಲಸಿಕೆ ಬಗ್ಗೆಗಿನ ಅನುಮಾನ  ಮುಂದುವರಿದಿದೆ. ಈ ಹಿನ್ನೆಲೆ ಫ್ಯಾಕ್ಟ್​-ಶೀಟ್​ ಬಿಡುಗಡೆ ಮಾಡಿರೋ ಭಾರತ್ ಬಯೋಟೆಕ್​, ಕೋವಾಕ್ಸಿನ್ ಲಸಿಕೆಯನ್ನ ಯಾರು ಹಾಕಿಸಿಕೊಳ್ಳಬಾರದು ಅನ್ನೋದನ್ನ ಹೇಳಿದೆ. ಕಂಪನಿ ಪ್ರಕಾರ, ರೋಗ ನಿರೋಧಕ ಶಕ್ತಿ ಕಮ್ಮಿ ಇರೋರು ಅಥವಾ ರೋಗ ನಿರೋಧಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಔಷಧಿಗಳನ್ನ ತೆಗೆದುಕೊಳ್ಳುತ್ತಿರೋರು ಮತ್ತು ಅಲರ್ಜಿ ಇರೋರು ಕೋವಾಕ್ಸಿನ್​ ಲಸಿಕೆ ಹಾಕಿಸಿಕೊಳ್ಳಬಾರದು.

ಯಾರು ಕೋವಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಬಾರದು?

– ಅಲರ್ಜಿ ಇರೋರು

– ಜ್ವರದಿಂದ ಬಳಲುತ್ತಿರೋರು

– ರಕ್ತಸ್ರಾವದ ಕಾಯಿಲೆಯಿಂದ ಬಳಲುತ್ತಿರೋರು ಅಥವಾ ರಕ್ತ ತೆಳ್ಳಗಾಗಿಸಲು ಔಷಧಿ ತೆಗೆದುಕೊಳ್ಳುತ್ತಿರೋರು

– ಗರ್ಭಿಣಿಯರು ಅಥವಾ ಎದೆ ಹಾಲು ಉಣಿಸುತ್ತಿರೋರು

– ಬೇರೆ ಯಾವುದಾದ್ರೂ ಗಂಭೀರ ಕಾಯಿಲೆಯಿಂದ ಬಳಲುತ್ತಿರೋರು

– ಆಲ್ರೆಡಿ ಬೇರೆ ಕೊರೋನಾ ಲಸಿಕೆ ಹಾಕಿಸಿಕೊಂಡೋರು.. ಇವರೆಲ್ಲಾ ಭಾರತ್​ ಬಯೋಟೆಕ್​ನ ‘ಕೋವಾಕ್ಸಿನ್’ ಲಸಿಕೆ ಹಾಕಿಸಿಕೊಳ್ಳಬಾರದು ಅಂತ ಕಂಪನಿ ಹೇಳಿದೆ.

ಕಿಮೋಥೆರಪಿ ಮಾಡಿಸಿಕೊಳ್ಳುತ್ತಿರೋ ಕ್ಯಾನ್ಸರ್ ಪೇಷಂಟ್ಸ್, ಹೆಚ್​​ಐವಿ ಪಾಸಿಟಿವ್ ಇರೋರು, ಸ್ಟಿರಾಯ್ಡ್​ ತೆಗೆದುಕೊಳ್ಳುತ್ತಿರೋರು ಕೂಡ ಕೊರೋನಾ ಲಸಿಕೆ ಹಾಕಿಸಿಕೊಳ್ಳಬಹುದು. ಆದ್ರೆ ಅವರ ಮೇಲೆ ಲಸಿಕೆ ಕೆಲಸ ಮಾಡುವ ಸಾಧ್ಯತೆ ಸ್ವಲ್ಪ ಕಮ್ಮಿ ಇರುತ್ತೆ ಅಂತ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೇಳಿತ್ತು. ಇದೀಗ ಭಾರತ್ ಬಯೋಟೆಕ್ ಕಂಪನಿ ಕೆಲವೊಂದು ವರ್ಗದ ಜನ ಕೋವಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಬಾರದು ಅಂತ ಹೇಳಿದೆ.

ಇನ್ನು ಲಸಿಕೆ ಹಾಕಿಸಿಕೊಳ್ಳೋರು ತಮ್ಮ ಆರೋಗ್ಯ ಸ್ಥಿತಿ ಬಗ್ಗೆ, ಅಲರ್ಜಿ ಇದ್ದರೆ ಅದರ ಬಗ್ಗೆ ಮತ್ತು ತೆಗೆದುಕೊಳ್ಳುತ್ತಿರುವ ಔಷಧಿಗಳ ಬಗ್ಗೆ ಲಸಿಕೆ ಹಾಕೋರಿಗೆ ಮೊದಲೇ ತಿಳಿಸಬೇಕು. ಲಸಿಕೆ ಚುಚ್ಚಿದ ಜಾಗದಲ್ಲಿ ನೋವು, ಊತ ಅಥವಾ ಕೆರೆತ ಸೇರಿದಂತೆ ಮೈ-ಕೈ ನೋವು, ತಲೆ ನೋವು, ಜ್ವರ, ಆಯಾಸ, ವಾಕರಿಕೆ, ವಾಂತಿ ಮುಂತಾದ ಸೈಡ್​ ಎಫೆಕ್ಟ್ಸ್​ ಕಾಣಿಸಿಕೊಳ್ಳಬಹುದು ಅಂತ ಫ್ಯಾಕ್ಟ್​ ಶೀಟ್​ನಲ್ಲಿ ಹೇಳಿದೆ. ಇದರ ಜೊತೆಗೆ ಗಂಭೀರವಾಗಿ ಅಲರ್ಜಿ ಉಂಟಾಗುವ ಸಾಧ್ಯತೆ ತುಂಬಾ ಕಮ್ಮಿ ಇರುತ್ತೆ. ಹೀಗಾಗಿ ಲಸಿಕೆ ಚುಚ್ಚಿದ 30 ನಿಮಿಷಗಳವರೆಗೆ ಅಲ್ಲೇ ಇರಬೇಕಾಗುತ್ತೆ. ಒಂದ್ವೇಳೆ ಗಂಭೀರ ಪ್ರಮಾಣದ ಅಲರ್ಜಿ ಕಾಣಿಸಿಕೊಂಡರೆ ಅಂಥವರಿಗೆ ಸರ್ಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಕಂಪೆನ್ಸೇಷನ್ (ಪರಿಹಾರ) ಕೂಡ ನೀಡಲಾಗುತ್ತೆ ಅಂತ ಭಾರತ್ ಬಯೋಟೆಕ್ ಕಂಪನಿ ತನ್ನ ಫ್ಯಾಕ್ಟ್​ ಶೀಟ್​ನಲ್ಲಿ ಹೇಳಿದೆ.

-masthmagaa.com

Contact Us for Advertisement

Leave a Reply