ಟ್ವಿಟ್ಟರ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಇವತ್ತಿಂದಲೇ ಬ್ಯಾನ್?

masthmagaa.com:

ಸೋಷಿಯಲ್ ಮೀಡಿಯಾಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಗೈಡ್​ಲೈನ್ಸ್​​ಗಳನ್ನು ಅಳವಡಿಸಿಕೊಳ್ಳಲು ಇವತ್ತು ಕೊನೆಯ ದಿನ.. ಈ ಬಗ್ಗೆ ನಿನ್ನೆಯಷ್ಟೇ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟು ಎಚ್ಚರಿಸಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಫೇಸ್​ಬುಕ್​​, ಸರ್ಕಾರದ ಹೊಸ ನಿಯಮಗಳನ್ನು ಫಾಲೋ ಮಾಡಬೇಕು ಅನ್ಕೊಂಡಿದೀವಿ. ಈ ಬಗ್ಗೆ ಕೆಲಸ ನಡೀತಿದೆ ಅಂತ ಹೇಳಿದೆ. ಆದ್ರೆ ಗೈಡ್​ಲೈನ್ಸ್​ನ್ನು ಇವತ್ತಿಂದಲೇ ಅಳವಡಿಸಿಕೊಳ್ತೀವಿ ಅಂತ ಫೇಸ್​ಬುಕ್ ಹೇಳಿಲ್ಲ.. ಇನ್​ಸ್ಟಾಗ್ರಾಂ, ಟ್ವಿಟ್ಟರ್​ ಕೂಡ ಹೊಸ ನಿಯಮಗಳನ್ನು ಅಳವಡಿಸಿಕೊಂಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ನಾಳೆ ಯಾವ ಹೆಜ್ಜೆ ಇಡುತ್ತೆ ಅನ್ನೋ ಕುತೂಹಲ ಮೂಡಿದೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಎಲ್ಲಾ ಬ್ಯಾನ್ ಅಂತ ಆಲ್ರೆಡಿ RIP ಮೆಸೇಜಸ್ ಹರಿದಾಡ್ತಿದೆ.

-masthmagaa.com

Contact Us for Advertisement

Leave a Reply