ಪರಿಹಾರ ಕೊಡಲಿಲ್ಲ ಸರ್ಕಾರ..ಸಿಟ್ಟಿಗೆದ್ದ ಅಜ್ಜ ಮಾಡಿದ್ದೇನು..?

ರಾಜ್ಯದಲ್ಲಿ ಈಗ ಪರಿಹಾರದ್ದೇ ಗದ್ದಲ, ಗಲಾಟೆ. ಪರಿಹಾರ ಸಿಗಲಿಲ್ಲ ಅಂತ ಉತ್ತರ ಕರ್ನಾಟಕದ ಜನ ಕಂಗಾಲಾಗಿದ್ದಾರೆ. ಆದ್ರೆ ಹಿಮಾಚಲ ಪ್ರದೇಶದಲ್ಲಿ ಒಬ್ಬರು ಅಜ್ಜ ಪರಿಹಾರ ನೀಡಲಿಲ್ಲ ಅಂತ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಕಂಗ್ರಾ ಎಂಬಲ್ಲಿ ವೃದ್ಧರೊಬ್ಬರು ತಮ್ಮ ಮನೆ ಮುಂದೆ ರಸ್ತೆಗೆ ಬಿದಿರುಗಳನ್ನು ಅಡ್ಡಹಾಕಿ ಬರೋ ವಾಹನಗಳ ಬಳಿ ಶುಲ್ಕ ವಸೂಲಿ ಮಾಡಿದ್ದಾರೆ. ಯಾಕೆ ಎಂದು ಕೇಳಿದ್ದಕ್ಕೆ ನಮ್ಮ ಮನೆ ಹಾಳಾಗಿದೆ. ಆದ್ರೆ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಅದಕ್ಕೆ ಹೀಗೆ ಶುಲ್ಕ ವಸೂಲಿ ಮಾಡ್ತಿದ್ದೀನಿ ಎಂದಿದ್ದಾರೆ. ಆದ್ರೆ ಪಾಪ ಆ ಅಜ್ಜನನ್ನು ಬಂಧಿಸಿರುವ ಪೊಲೀಸರು ಸುಲಿಗೆ ಕೇಸ್ ಜಡಿದಿದ್ದಾರೆ.

https://www.facebook.com/TimesofIndia/videos/392162778399350/

Contact Us for Advertisement

Leave a Reply