ಕಮಲಾ ಹ್ಯಾರಿಸ್ಸೇ ನನ್ನ ರನ್ನಿಂಗ್ ಮೇಟ್​! ಜೋ ಬೈಡೆನ್ ಹೇಳಿಕೆ

masthmagaa.com:

ಅಮೆರಿಕದಲ್ಲಿ ಜೋ ಬೈಡೆನ್ ಅಧ್ಯಕ್ಷರಾಗಿ ಒಂದು ವರ್ಷ ಭರ್ತಿಯಾಗಿದೆ. ಈ ನಡುವೆ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​​ಗೆ ಆಗಿ ಬರ್ತಿಲ್ಲ. ಕಮಲಾ ಹ್ಯಾರಿಸ್ ಜೋ ಬೈಡೆನ್ ಜೊತೆ ಒಂದೂ ವೇದಿಕೆಯಲ್ಲಿ ಕಾಣಿಸಿಕೊಳ್ಳಲ್ಲ ಅಂತೆಲ್ಲಾ ಹೇಳಲಾಗ್ತಿತ್ತು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಜೋ ಬೈಡೆನ್, 2024ರಲ್ಲಿ ನಾನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ರೆ, ಕಮಲಾ ಹ್ಯಾರಿಸ್ ಅವರೇ ರನ್ನಿಂಗ್ ಮೇಟ್ ಆಗಿರಲಿದ್ದಾರೆ. ಅಂದ್ರೆ ಅವರೇ ಉಪಾಧ್ಯಕ್ಷೆ ಅಂತ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಮಲಾ ಹ್ಯಾರಿಸ್​ ಬಗ್ಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಅನ್ನೋದನ್ನ ತಿಳಿಸಿದ್ದಾರೆ. ಇದೇ ಪ್ರಶ್ನೆಯನ್ನು ಡಿಸೆಂಬರ್​ನಲ್ಲಿ ಕಮಲಾ ಹ್ಯಾರಿಸ್ ಬಳಿ ಕೇಳಿದಾಗ, ನಾನು ಮತ್ತು ಜೋ ಬೈಡೆನ್ ಇನ್ನೂ ಆ ಬಗ್ಗೆ ಚರ್ಚೆ ನಡೆಸಿಲ್ಲ. ಅದಕ್ಕೆ ಇನ್ನೂ ಟೈಂ ಇದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply