ಲಖಿಂಪುರ ಖೇರಿ ಹಿಂಸಾಚಾರ ಆರೋಪಿಗೆ ಜಾಮೀನು ಕೊಟ್ರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆ: ಯುಪಿ ಸರ್ಕಾರ

masthmagaa.com:

ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಕೇಸ್‌ನ ಆರೋಪಿಗಳಲ್ಲಿ ಒಬ್ರಾಗಿರೋ ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವ್ರ ಪುತ್ರನ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನ ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಿರೋಧಿಸಿದೆ. ಇವ್ರು ಮಾಡಿರೋದು ಘೋರ ಮತ್ತು ಗಂಭೀರ ಅಪರಾಧವಾಗಿದ್ದು, ಜಾಮೀನು ನೀಡೋದ್ರಿಂದ ಸಮಾಜಕ್ಕೆ ತಪ್ಪು ಸಂದೇಶ ಕೊಟ್ಟಂತಾಗುತ್ತೆ ಅಂತ ಅಲ್ಲಿನ ಸರ್ಕಾರದ ಪರ ಲಾಯರ್‌ ಹೇಳಿದ್ದಾರೆ. ಅಂದ್ಹಾಗೆ 2021 ಅಕ್ಟೋಬರ್‌ 3ರಂದು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡ್ತಿದ್ದ ರೈತರ ಮೇಳೆ ಆರೋಪಿ ಆಶಿಶ್‌ ಮಿಶ್ರಾ ಹಾಗೂ ಅವ್ರ ಬೆಂಗಾವಲು ಪಡೆ ವಾಹನಗಳು ಚಲಿಸಿದ್ವು. ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ಕು ಜನ ರೈತರು ಸೇರಿ 8 ಜನ ಮೃತಪಟ್ಟಿದ್ರು.

-masthmagaa.com

Contact Us for Advertisement

Leave a Reply