ಪಾರ್ಲಿಮೆಂಟ್‌ ಫೌಂಡೇಷನ್‌ನ ನಡುಗಿಸ್ತೀನಿ: ಉಗ್ರ ಪನ್ನುನ್‌ ಹೊಸ ವಿಡಿಯೋ!

masthmagaa.com:

ಮೊದಲೇ ಭಾರತದ ವಿರುದ್ಧ ಕಿಡಿಕಾರ್ತಿದ್ದ ಪನ್ನುನ್‌ಗೆ ಇದೀಗ ಭಾರತದವ್ರು ತನ್ನ ವಿರುದ್ಧವೇ ಹತ್ಯೆ ಸಂಚು ರೂಪಿಸಿದ್ದಾರೆ ಅಂತ ಗೊತ್ತಾದ ನಂತರ ಇನ್ನಷ್ಟು ಕಂಬಳಿ ಹುಳ ಬಿಟ್ಟವರ ಹಾಗೇ ಆಡ್ತಿದ್ದಾನೆ. ಇದೀಗ ಮತ್ತೆ ಭಾರತದ ಸಂಸತ್‌ ಮೇಲೆ ದಾಳಿ ಮಾಡ್ತೀನಿ ಅಂತ ಬೆದರಿಕೆ ಹಾಕಿ ವಿಡಿಯೋ ರಿಲೀಸ್‌ ಮಾಡಿದ್ದಾನೆ. 2001ರಲ್ಲಿ ಭಾರತದ ಪಾರ್ಲಿಮೆಂಟ್‌ ಮೇಲೆ ದಾಳಿ ಮಾಡಿದ್ದ ಉಗ್ರ ಅಫ್ಜಲ್‌ ಗುರು ಫೋಟೋ ಜೊತೆ ʻದೆಹಲಿ ಬನೇಗಾ ಖಲಿಸ್ತಾನ್‌ʼ ಅಂದ್ರೆ ದೆಹಲಿ ಕೂಡ ಖಲಿಸ್ತಾನ್‌ ಆಗುತ್ತೆ ಅನ್ನೋ ಕ್ಯಾಪ್ಶನ್‌ ಜೊತೆ ಈ ವಿಡಿಯೋ ರಿಲೀಸ್‌ ಆಗಿದ್ದು, ಡಿಸೆಂಬರ್‌ 13ರಂದು ಅಥ್ವಾ ಅದ್ರ ಮೊದಲು ನಾನು ಭಾರತದ ಪಾರ್ಲಿಮೆಂಟ್‌ ಫೌಂಡೇಷನ್‌ನ ಗಡ ಗಡ ಅಂತ ನಡುಗಿಸಿಬಿಡ್ತೀನಿʼ ಅಂತ ಬೆದರಿಕೆ ನೀಡಿದ್ದಾನೆ. ಈ ಹೊಸ ವಿಡಿಯೋಗೆ ಎಚ್ಚೆತ್ಕೊಂಡ ಭಾರತೀಯ ಭದ್ರತಾ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸ್‌, ದೆಹಲಿ ಸುತ್ತಮುತ್ತ ಭದ್ರತೆ ಏರ್ಪಡಿಸಿದ್ದಾರೆ. ಅಂದ್ಹಾಗೆ ಈ ಹಿಂದೆ ಹಲವು ಬಾರಿ ಪನ್ನುನ್‌ ಈ ರೀತಿ ವಿಡಿಯೋ ಮೂಲಕ ಭಾರತೀಯರಿಗೆ ಬೆದರಿಕೆ ಹಾಕ್ತಾನೇ ಬಂದಿದ್ದಾನೆ. ಆದ್ರೆ ಇವೆಲ್ಲಾ ಕೇವಲ ಹುಸಿ ಬೆದರಿಕೆಗಳಾಗಿವೆ.

ಇನ್ನೊಂದು ಕಡೆ ಉಗ್ರ ಪನ್ನುನ್‌ ಹತ್ಯೆ ಸಂಚು ಪ್ರಕರಣದ ಕುರಿತು ತನಿಖೆ ಮತ್ತು ವಿಚಾರಣೆಗಳು ನಡೀತಿರೋ ಮಧ್ಯದಲ್ಲಿ ಇದೀಗ ಭಾರತ ನಡೆಸೋ ತನಿಖೆಯ ರಿಸಲ್ಟ್‌ಗೆ ವೈಟ್‌ ಮಾಡ್ತಿದ್ದೀವಿ ಅಂತ ಅಮೆರಿಕ ಹೇಳಿದೆ. ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಅವ್ರು, ʻನಾನು ಈ ಕೇಸ್‌ಗೆ ಸಂಬಂಧಿಸಿ ಏನೂ ಕಮೆಂಟ್‌ ಮಾಡಲ್ಲ. ಯಾಕಂದ್ರೆ ಇದ್ರ ಬಗ್ಗೆ ವಿಚಾರಣೆಯನ್ನ ಕೋರ್ಟ್‌ನಲ್ಲಿ ನಡೆಸಲಾಗುತ್ತೆ. ಈ ಬಗ್ಗೆ ಭಾರತದ ಜೊತೆ ಚರ್ಚೆ ನಡೆಸಿದ್ದೀವಿ. ಜೊತೆಗೆ ಈ ವಿಚಾರವನ್ನ ನಾವು ತುಂಬಾ ಸೀರಿಯಸ್‌ ಆಗಿ ತೆಗೆದುಕೊಳ್ತೇವೆ ಅಂತಾನೂ ಸೂಚಿಸಿದ್ದೇವೆ. ಪನ್ನುನ್‌ ಹತ್ಯೆ ಕೇಸ್‌ ಕುರಿತು ತನಿಖೆ ಸ್ಟಾರ್ಟ್‌ ಮಾಡ್ತೀವಿ ಅಂತ ಭಾರತ ಓಪನ್‌ ಆಗಿ ಹೇಳಿದೆ. ಈಗ ನಾವು ಅವ್ರ ತನಿಖೆಯ ರಿಸಲ್ಟ್‌ಗಾಗಿ ಕಾಯ್ತಿದ್ದೀವಿ. ನಾವಿದನ್ನ ಬಹಳ ಸೀರಿಯಸ್‌ ಆಗಿ ತೆಗೆದುಕೊಳ್ತೀವಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply