ಪಾಕ್​​​ಗೆ ಹರಿಯುತ್ತಿರುವ ನೀರು ನಿಲ್ಲಿಸಿ, ಹರಿಯಾಣಕ್ಕೆ ತಿರುಗಿಸುತ್ತೇನೆ: ಮೋದಿ

ಹರಿಯಾಣ: ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸಿ, ಅದನ್ನು ಹರಿಯಾಣಕ್ಕೆ ತಿರುಗಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಚಾರ್ಕಿ ದಾದ್ರಿಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ಹರಿಯಾಣಕ್ಕೆ ಸೇರಿದ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ಆದ್ರೆ ಈ ನಿಮ್ಮ ಮೋದಿ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸಿ, ನಿಮ್ಮ ಮನೆಗಳಿಗೆ ಹರಿಯವಂತೆ ಮಾಡುತ್ತಾರೆ.  ಈ ವಿಚಾರವಾಗಿ ಈಗಾಗಲೇ ಕೆಲಸ ಶುರು ಮಾಡಿದ್ದೇವೆ. ಪಾಕಿಸ್ತಾನಕ್ಕೆ  ಹರಿಯುತ್ತಿರುವ ಆ ನೀರು ಭಾರತ ಮತ್ತು ಹರಿಯಾಣದ ರೈತರಿಗೆ ಸೇರಿದ್ದು, ನಾನು ಅದಕ್ಕಾಗಿ ಹೋರಾಡುತ್ತೇನೆ ಅಂದ್ರು.

ಇನ್ನು ಜಮ್ಮು ಕಾಶ್ಮೀರ ಮತ್ತು 370ನೇ ವಿಧಿ ರದ್ದತಿ ವಿಚಾರವಾಗಿ ಸುಳ್ಳು ಸುದ್ದಿ ಹರಡುತ್ತಿರುವ ಕಾಂಗ್ರೆಸ್ಸನ್ನು ಸೋಲಿಸಿ, ಬುದ್ಧಿಕಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

Contact Us for Advertisement

Leave a Reply