ಜೆಮಿನಿ AI ಯಡವಟ್ಟು: ಸುಂದರ್‌ ಪಿಚೈ ರಾಜಿನಾಮೆಗೆ ಆಗ್ರಹ!

masthmagaa.com:

ಜೆಮಿನಿ AIನ ಕೆಲವು ಎಡವಟ್ಟು ಉತ್ತರಗಳಿಂದ ಇದೀಗ ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಸಂಕಟ ಶುರುವಾಗಿದೆ. ಯಾವ ಮಟ್ಟಕ್ಕೆ ಅಂದ್ರೆ ಕೆಲವರು ಸುಂದರ್‌ ಪಿಚೈ ಸಿಇಒ ಸ್ಥಾನದಿಂದ ಕೆಳಗಿಳೀಬೇಕು ಅಂತೆಲ್ಲಾ ಹೇಳ್ತಿದ್ದಾರೆ. ಇತ್ತೀಚೆಗಷ್ಟೆ ಜೆಮಿನಿ ಕಪ್ಪು ವರ್ಣೀಯರು ಹಾಗೂ ಏಷ್ಯಾದವರಿರೋ ನಾಜಿ ಆರ್ಮಿಯ ಫೋಟೋ ಜನರೇಟ್‌ ಮಾಡಿತ್ತು. ಅಲ್ಲದೆ ಅಮೆರಿಕದ ರಿಪಬ್ಲಲಿಕನ್‌ ಹಾಗೂ ರೈಟ್‌ ಲೀನಿಂಗ್‌ ರಾಜಕೀಯ ವ್ಯಕ್ತಿಗಳು ಹಾಗೂ ಗಣ್ಯವ್ಯಕ್ತಿಗಳನ್ನ ಡೆಮಾಕ್ರಟಿಕ್‌ ನಾಯಕರಿಗಿಂತ ನೆಗೆಟಿವ್‌ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ ಪಿಎಂ ಮೋದಿ ಬಗ್ಗೆ ಪ್ರಶ್ನೇ ಕೇಳ್ದಾಗ್ಲೂ, ಅಡ್ಡ ಗೋಡೆ ಮೇಲೆ ದೀಪ ಇಟ್ಟಂಗೆ ಉತ್ತರ ಕೊಟ್ಟಿತ್ತು. ಇದನ್ನ ಹಲವರು ಖಂಡಿಸಿದ್ರು. ಖುದ್ದು ಸುಂದರ್‌ ಪಿಚೈ, ಮೋದಿ ಬಗ್ಗೆ ಜೆಮಿನಿ ಕೊಟ್ಟ ಉತ್ತರವನ್ನ ಅಕ್ಸೆಪ್‌ ಮಾಡ್ಕೊಳೋಕ್‌ ಆಗಲ್ಲ ಅಂತೇಳಿದ್ರು. ಅಷ್ಟಾದ್ರು ಸಿಇಒ ಸುಂದರ್‌ ಪಿಚೈ ವಿರುದ್ಧ ಹಲವಾರು ಹೇಳಿಕೆಗಳು ಕೇಳಿ ಬರ್ತಿವೆ.

-masthmagaa.com

Contact Us for Advertisement

Leave a Reply