ಮಿನಿ ಸುಮೋ ವ್ರಸ್ಲರ್​​ಗೆ ಜನ್ಮನೀಡಿದ ಮಹಿಳೆ..! 6 ಕೆಜಿ ತೂಕದ ಮಗು

ತಾನು ಮಿನಿ ಸುಮೋ ವ್ರಸ್ಲರ್​​​ಗೆ ಜನ್ಮ ಕೊಟ್ಟಿದ್ದೇನೆ ಅಂತ ಮಹಿಳೆಯೊಬ್ಬರು ಹೇಳಿದ್ದಾರೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್​​ನ ಆಸ್ಪತ್ರೆಯೊಂದರಲ್ಲಿ ಎಮ್ಮಾ ಎಂಬ ಮಹಿಳೆಯೊಬ್ಬರು ಗರ್ಭಿಣಿಯಾದ 38 ವಾರಗಳ ಬಳಿಕ 6 ಕೆಜಿ ತೂಕದ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಜನಿಸೋ ಮಕ್ಕಳ ಸರಾಸರಿ ತೂಕ 3.3 ಕೆಜಿ ಇರುತ್ತೆ. ಆದ್ರೆ ಈ ಮಗು 6 ಕೆಜಿ ತೂಕದೊಂದಿಗೆ ಜನಿಸಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಎಮರ್ಜೆನ್ಸಿ ಸಿಜರಿನ್ ಮೂಲಕ ಮಗು ಜನಿಸಿದ್ದು, ಮಗು ಮತ್ತು 27 ವರ್ಷದ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಕೆಲ ಸಮಯದ ಹಿಂದೆ ಅಲ್ಟ್ರಾ ಸೌಂಡ್ ಮೂಲಕ ಪರಿಶೀಲನೆ ನಡೆಸಿದಾಗ ಮಗುವಿನ ತೂಕ 4 ಕೆಜಿ ಇರೋದು ಗೊತ್ತಾಗಿತ್ತು. ಎಮ್ಮಾ ಮತ್ತು ಅವರ ಪತಿ ತಮ್ಮ ಮಗು 4 ಕೆಜಿಗಿಂತಲೂ ಅಧಿಕವಾಗಿ 6 ಕೆಜಿ ಇರುತ್ತೆ ಅಂತ ಅಂದುಕೊಂಡಿರಲೇ ಇಲ್ಲ.

ಇನ್ನೊಂದು ವಿಶೇಷ ಅಂದ್ರೆ ಎಮ್ಮಾ ಈ ರೀತಿ ಮಗುವಿಗೆ ಜನ್ಮ ನೀಡುತ್ತಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಎಮ್ಮಾ 5.5 ಕೆಜಿ ತೂಕದ ಮಗಳಿಗೆ ಜನ್ಮ ಕೊಟ್ಟಿದ್ದರು. ಎಮ್ಮಾಗೆ ಡಯಾಬಿಟಿಸ್ ಇದ್ದು, ಇದೇ ಕಾರಣಕ್ಕೆ ಮಗುವಿನ ತೂಕ ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತಿದೆ.

Contact Us for Advertisement

Leave a Reply