ಧರ್ಮನಿಂದನೆ ಆರೋಪ! ಮುಸ್ಲಿಂ ಮಹಿಳೆಗೆ ಮರಣ ದಂಡನೆ ಶಿಕ್ಷೆ

masthmagaa.com:

ಪಾಕಿಸ್ತಾನದಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ಧರ್ಮನಿಂದನೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಅನೀಕ ಅಟೀಖ್​ ಅನ್ನೋ 26 ವರ್ಷದ ಈ ಮಹಿಳೆ ಮುಸ್ಲಿಂ ಪ್ರವಾದಿ ಮುಹಮ್ಮದ್ ಬಗ್ಗೆ ವಾಟ್ಸಾಪ್​​​ನಲ್ಲಿ ವ್ಯಂಗ್ಯಚಿತ್ರ ಮತ್ತು ಅಪಮಾನಕರ ಸಂದೇಶವನ್ನ ಹರಿಬಿಟ್ಟಿರೋ ಆರೋಪ ಹೊತ್ತಿದ್ರು. 2020ರ ಮೇ ತಿಂಗಳಲ್ಲಿ ಈಕೆಯನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ರಾವಲ್​ಪಿಂಡಿಯಲ್ಲಿ ಕೋರ್ಟ್​ ಮರಣದಂಡನೆ ವಿಧಿಸಿದೆ. ಅಂದಹಾಗೆ ಪಾಕಿಸ್ತಾನದಲ್ಲಿ ಧರ್ಮನಿಂದನೆ ಪ್ರಕರಣದಲ್ಲಿ ಅರೆಸ್ಟ್ ಆಗೋರಲ್ಲಿ ಹೆಚ್ಚಿನವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತೆ. ಉಳಿದ ಹಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತೆ.

-masthmagaa.com

Contact Us for Advertisement

Leave a Reply