ಭಾರತದ ಮೊದಲ ಮೂಗಿನ ಮೂಲಕ ಹಾಕಲಾಗುವ ಲಸಿಕೆ ಲಾಂಚ್‌ಗೆ ರೆಡಿ! ಯಾವಾಗ?

masthmagaa.com:

ಭಾರತದಲ್ಲಿ ತಯಾರಿಸಲಾದ ಮೊದಲ ಮೂಗಿನ ಮೂಲಕ ಹಾಕಲಾಗುವ ಲಸಿಕೆಯನ್ನ ಲಾಂಚ್‌ ಮಾಡೋಕೆ ಭಾರತ್‌ ಬಯೋಟೆಕ್‌ ಕಂಪನಿ ಮುಂದಾಗಿದೆ. ʻಇನ್ಕೋವ್ಯಾಕ್‌ʼ (iNCOVACC) ಹೆಸರಿನ ಲಸಿಕೆಯನ್ನ ಜನವರಿ 26ರಂದು ಅಧಿಕೃತವಾಗಿ ಲಾಂಚ್‌ ಮಾಡಲಾಗುತ್ತೆ ಅಂತ ಕಂಪನಿಯ ಮ್ಯಾನೇಜಿಂಗ್‌ ಡೈರಕ್ಟರ್‌ ಕೃಷ್ಣ ಎಲ್ಲ ತಿಳಿಸಿದ್ದಾರೆ. ಇನ್ನು iNCOVACC ಅನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಪ್ರಮಾಣದ ಖರೀದಿಗಾಗಿ ಪ್ರತಿ ಡೋಸ್‌ಗೆ 325 ರೂಪಾಯಿಗಳಂತೆ ನೀಡಲಾಗುತ್ತದೆ. ಇದೇ ಲಸಿಕೆ ಖಾಸಗಿ ಲಸಿಕಾ ಕೇಂದ್ರಗಳಲ್ಲಿ 800 ರೂಪಾಯಿಗೆ ಲಭ್ಯವಿರುತ್ತೆ ಅಂತ ಭಾರತ್ ಬಯೋಟೆಕ್ ಹೇಳಿದೆ.

-masthmagaa.com

Contact Us for Advertisement

Leave a Reply