ಈ ನಗರಗಳಲ್ಲಿ ವಾಯುಮಾಲಿನ್ಯ ತುಂಬಾ ಜಾಸ್ತಿ ಇದೆ..ಎಚ್ಚರಿಕೆ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ!

masthmagaa.com:

ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ವಾಯು ಮಾಲಿನ್ಯ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗ್ತಿದೆ. ಇದರ ನಡುವೆಯೇ ದೇಶದ ಕೆಲವು ನಗರಗಳು ವಿಶ್ವ ಆರೋಗ್ಯ ಸಂಸ್ಥೆಯ ವಾಯುಮಾಲಿನ್ಯದ ಮಾರ್ಗಸೂಚಿಯನ್ನ ಮೀರಿದೆ ಅಂತ ವರದಿಯಾಗಿದೆ. ಇದರಿಂದ ಗಂಭೀರ ರೀತಿಯ ಆರೋಗ್ಯ ಅಪಾಯಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ಅಂತ ಸಂಸ್ಥೆಯೊಂದು ಎಚ್ಚರಿಕೆ ನೀಡಿದೆ. ದೆಹಲಿ ಮತ್ತು ಕೊಲ್ಕತ್ತಾದಂತಹ ನಗರಗಳಲ್ಲಿ ಅಪಾಯಕಾರಿ ಸೂಕ್ಷ್ಮ ಕಣಗಳಾದ PM2.5 ಹೆಚ್ಚಿರುವ ಕಾರಣ ನಗರಗಳು ಕಲುಷಿತಗೊಂಡಿದೆ. ಚೀನಾದ ಶಾಂಘೈ ಮತ್ತು ರಷ್ಯಾದ ಮಾಸ್ಕೋ ನಗರಗಳಲ್ಲಿ ನೈಟ್ರೋಜನ್‌ ಡೈ ಆಕ್ಸೈಡ್‌ NO2 ಹೆಚ್ಚಿರುವ ಪರಿಣಾಮ ಆ ನಗರಗಳು ಕಲುಷಿತಗೊಂಡಿದೆ. ಹೀಗಂತ ಯುಎಸ್ ಮೂಲದ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್‌ನ (HEI) ಸ್ಟೇಟ್ ಆಫ್ ಗ್ಲೋಬಲ್ ಏರ್ ಇನಿಶಿಯೇಟಿವ್ ಬಿಡುಗಡೆ ಮಾಡಿದ ಸಂಶೋಧನಾ ವರದಿಯಿಂದ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply