ಹಿಮಾಚಲ ಪ್ರದೇಶ: ವಿಶ್ವದಲ್ಲೇ ಅತಿ ಎತ್ತರದ ಚುನಾವಣಾ ಮತಗಟ್ಟೆ!

masthmagaa.com:

ಇಂದು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ ಹಾಗೂ ವಿರೋಧಗ ಪಕ್ಷ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. 68 ವಿಧಾನಸಭಾ ಕ್ಷೇತ್ರಗಳಿಗೆ 5 ಗಂಟೆಯವರೆಗೂ ನಡೆದ ಮತದಾನದಲ್ಲಿ ಒಟ್ಟು 65.5% ಜನ ತಮ್ಮ ಮತ ಚಲಾಯಿಸಿದ್ದಾರೆ. ಮತದಾನಕ್ಕೆ ಒಟ್ಟು 7,884 ಮತಗಟ್ಟೆಗಳನ್ನ ಸ್ಥಾಪಿಸಲಾಗಿತ್ತು. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೊ ಮೂಲಕ ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಟ್ರೆಂಡ್‌ನ್ನ ಬದಲಾಯಿಸೊ ಲೆಕ್ಕಾಚಾರದಲ್ಲಿದೆ. ಇತ್ತ ಉಪಚುನಾವಣೆಗಳಲ್ಲಿ ಗೆದ್ದು, ವಿಶ್ವಾಸ ಹೆಚ್ಚಿಸಿಕೊಂಡಿರೊ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದೆ. ಚುನಾವಣೆಗಾಗಿ 15,256 ಅಡಿ ಎತ್ತರದ ಇಲ್ಲಿನ ತಾಶಿಗಾಂಗ್‌ ಪ್ರದೇಶದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. 52 ಜನ ಮತಹಾಕುವ ಈ ಮತಗಟ್ಟೆ ವಿಶ್ವದಲ್ಲೇ ಅತಿ ಎತ್ತರದ ಮತಗಟ್ಟೆಯಾಗಿದೆ. ಚುನಾವಣಾ ಫಲಿತಾಂಶ ಡಿಸೆಂಬರ್‌ 8ರಂದು ಹೊರಬೀಳಲಿದೆ.

-masthmagaa.com

Contact Us for Advertisement

Leave a Reply