ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರೋದು ನಿಜ: ಕೇಂದ್ರ ಸರ್ಕಾರ

masthmagaa.com:

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ INFLATION., ಅಂದ್ರೆ ಹಣದುಬ್ಬರ ತುಂಬಾ ಜಾಸ್ತಿಯಾಗಿದೆ ಅಂತ ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ INFLATION 1.32% ಇತ್ತು,. ಆದ್ರೆ ಈಗ 10.66 ಪರ್ಸೆಂಟ್ ಇದೆ ಅಂದಿದ್ದಾರೆ. ಸಿಂಪಲ್ಲಾಗಿ ನೋಡೋದಾದ್ರೆ INFLATION ಅಥವ ಹಣದುಬ್ಬರ ಅಂದ್ರೆ ವಸ್ತುಗಳ ಬೆಲೆ ಏರಿಕೆ ಆಗೋದು. ಇನ್ನೊಂದು ಥರ ಹೇಳಬೇಕು ಅಂದ್ರೆ ನಿಮ್ಮ ಕೈಲಿರೋ ದುಡ್ಡಿನ ಬೆಲೆ ಕಮ್ಮಿ ಆಗೋದು. ಯಾಕೆ ಈ ರೀತಿ ಆಗಿದೆ ಅಂತ ಕೇಳಿದ್ರೆ, ಮಿನರಲ್ ಆಯಿಲ್ ಬೆಲೆ ಏರಿಕೆ, ಲೋಹಗಳು, ಆಹಾರೇತರ ಸಾಮಾಗ್ರಿ, ಪೆಟ್ರೋಲಿಯಮ್ ಮತ್ತು ನ್ಯಾಚುರಲ್ ಗ್ಯಾಸ್.. ಅಂತಾರಾಷ್ಟ್ರೀಯವಾಗಿ ಈ ಎಲ್ಲದರಲ್ಲೂ ಬೆಲೆ ವಿಪರೀತ ಏರಿಕೆ ಆಗಿದೆ. ಹೀಗಾಗಿ ದೇಶದಲ್ಲಿ ಹಣದುಬ್ಬರ ಉಂಟಾಗಿದೆ ಅಂತ ಸರ್ಕಾರ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply