ಕುಸ್ತಿಪಟುಗಳು ಮತ್ತು ಫೆಡರೇಷನ್‌ನ ಚೀಫ್‌ ನಡುವೆ ಮುಂದುವರೆದ ಹಗ್ಗಜಗ್ಗಾಟ!

masthmagaa.com:

ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರಾದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ ಮುಂದುವರೆದಿದೆ. ನಿನ್ನೆ ಪ್ರತಿಭಟನಾ ನಿರತ ಕ್ರೀಡಾಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವ್ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದ್ರೆ ಈ ವಿಚಾರವಾಗಿ ಯಾವುದೇ ನಿರ್ಧಾರಕ್ಕೆ ಬರದ ಕಾರಣ ಮತ್ತೆ ತಮ್ಮ ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ. ಇನ್ನು ಟೋಕಿಯೋ ಒಲಂಪಿಕ್ಸ್‌ನಲ್ಲಿ ಮೆಡಲ್‌ ಗೆದ್ದಿಲ್ಲ ಅಂತ ವಿನೇಶ್‌ ಪೋಗಟ್‌ ಅವ್ರಿಗೆ WFI ಚೀಫ್‌ ಮಾನಸಿಕವಾಗಿ ಕಿರುಕುಳ ನೀಡಿ ಚಿತ್ರಹಿಂಸೆ ನೀಡಿದ್ರು. ಅದ್ರಿಂದ ವಿನೇಶ್‌ ಅವ್ರು ಆತ್ಮಹತ್ಯೆಗೂ ಪ್ರಯತ್ನಿಸಿದ್ರು ಅಂತ ಕುಸ್ತಿಪಟುಗಳು ಒಲಂಪಿಕ್‌ ಇಂಡಿಯಾ ಸಂಸ್ಥೆಯ ಚೀಫ್‌ ಪಿ.ಟಿ ಉಷಾ ಅವ್ರಿಗೆ ಬರೆದ ಪತ್ರದಲ್ಲಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ಇತ್ತ ನಾನು ಮಾತನಾಡಿದ್ರೆ ಸುನಾಮಿ ಬರುತ್ತೆ… ಯಾರದೋ ಸಹಾಯದಿಂದ ನಾನು ಈ ಸ್ಥಾನದಲ್ಲಿ ಇಲ್ಲ. ನಾನು ಜನರಿಂದ ಚುನಾಯಿತನಾಗಿದ್ದೇನೆ ಅಂತ ಬ್ರಿಜ್‌ ಭೂಷಣ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಗಳನ್ನ ಕೊಡ್ಬೇಡಿ.. ಅದ್ರಿಂದ ಸಮಸ್ಯೆ ಇನ್ನೂ ಹೆಚ್ಚಾಗ್ಬೋದು ಅಂತ ಫೆಡರೇಷನ್‌ನ ಚೀಫ್‌ಗೆ ತಿಳಿಸಿದ್ದಾರೆ. ಪ್ರಕರಣದ ತನಿಖೆಗೆ ಸಮಿತಿಯೊಂದನ್ನ ರಚಿಸಿ ಅಂತ ಕುಸ್ತಿಪಟುಗಳು ಕೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply