ಭಾರತಕ್ಕೆ ಬಂದ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ಗೆ ಭರ್ಜರಿ ಸ್ವಾಗತ

ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಭಾರತಕ್ಕೆ ಆಗಮಿಸಿದ್ದಾರೆ. ಚೆನ್ನೈಗೆ ಬಂದಿಳಿದ ಕ್ಸಿ ಜಿನ್ ಪಿಂಗ್ ಅವರನ್ನು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ತಮಿಳುನಾಡು ಸಿಎಂ ಪಳನಿಸ್ವಾಮಿ, ಡಿಸಿಎಂ ಪನ್ನೀರ್ ಸೆಲ್ವಂ ಸ್ವಾಗತಿಸಿದ್ರು. ಇದೇ ವೇಳೆ ವಿವಿಧ ಕಲಾತಂಡಗಳು ಕ್ಸಿ ಜಿನ್ ಪಿಂಗ್ ಅವರಿಗೆ ಸ್ವಾಗತ ಕೋರಿದವು. ಇದರಿಂದ ಸಂತಸಗೊಂಡ ಜಿನ್ ಪಿಂಗ್ ಕೈ ತೋರಿಸಿ ವಿಶ್ ಮಾಡಿದ್ರು. ಇನ್ನು ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ಕ್ಸಿ ಜಿನ್‍ಪಿಂಗ್ ಭೇಟಿಯಾಗಲಿದ್ದಾರೆ. ಚೆನ್ನೈನಿಂದ 56 ಕಿಲೋಮೀಟರ್ ದೂರದಲ್ಲಿರುವ ಈ ನಗರ ಈಗ ಖಾಕಿ ಭದ್ರಕೋಟೆಯಾಗಿ ಮಾರ್ಪಟ್ಟಿದೆ. 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಸಮುದ್ರದಲ್ಲಿ ಯುದ್ಧ ನೌಕೆ ಗಸ್ತು ತಿರುಗುತ್ತಿದೆ.

ಪ್ರಧಾನಿ ಮೋದಿ,  ಕ್ಸಿ ಜಿನ್ ಪಿಂಗ್  5 ಗಂಟೆಗಳ ಕಾಲ 4 ಸಭೆಗಳನ್ನು ನಡೆಸಲಿದ್ದಾರೆ. ಇಬ್ಬರೂ ನಾಯಕರು ಸಮುದ್ರ ದಡದಲ್ಲಿರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕ್ಸಿ ಜಿನ್ ಪಿಂಗ್ ಸುಮಾರು 24 ಗಂಟೆಗಳ ಕಾಲ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆಯಲಿದ್ದಾರೆ. ಮೋದಿ ಮತ್ತು ಕ್ಸಿ ಜಿನ್‍ಪಿಂಗ್ ಮಹಾಬಲಿಪುರಂನಲ್ಲಿರುವ 3 ಪ್ರಸಿದ್ಧ ಸ್ಮಾರಕಗಳಿಗೆ ಭೇಟಿ ನೀಡಲಿದ್ದು, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆ ಕ್ಸಿ ಜಿನ್‍ಪಿಂಗ್ ವಾಪಸ್ ತೆರಳುವ ಸಾಧ್ಯತೆ ಇದೆ.

Contact Us for Advertisement

Leave a Reply