masthmagaa.com:
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಹೆಲ್ಪ್ ಆಗುವ ಸಿಲಾಬಸ್ ಇಡಲಾಗುತ್ತೆ. ಆದ್ರೆ ಚೀನಾದ ಯುನಿವರ್ಸಿಟಿಗಳಲ್ಲಿನ ವಿದ್ಯಾರ್ಥಿಗಳಿಗೆ ಸ್ಪೈಗಳನ್ನ ಹೇಗೆ ಕ್ಯಾಚ್ ಮಾಡ್ಬೇಕು ಅನ್ನೊ ಸಿಲಾಬಸ್ ಇಡಲಾಗಿದೆ. ಮೇ ನಲ್ಲಿ ನಡೆದ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಕೆಲ ಎಕ್ಸ್‌ಟ್ರೀಮ್ ಸನ್ನಿವೇಶಗಳಲ್ಲಿ ಯಾವ ರೀತಿ ಥಿಂಕ್ ಮಾಡ್ಬೇಕು ಹಾಗೂ ಅದರ ಇಂಪಾರ್ಟನ್ಸ್ ಏನು ಅನ್ನೊ ವಿಷಯದ ಕುರಿತು ಒತ್ತಿ ಹೇಳಿದ್ರು. ಅದರ ಬೆನ್ನಲ್ಲೇ ಚೀನಾ ಆಂಟಿ-ಸ್ಪೈ ಕಾನೂನನ್ನ ಪಾಸ್ ಮಾಡಿದೆ. ಹೀಗಾಗಿ ಚೀನಾದ ಯುನಿವರ್ಸಿಟಿಗಳಲ್ಲೂ ಸ್ಪೈ ಬಗ್ಗೆ ಸಿಲಾಬಸ್‌ಗಳು, ಪ್ರದರ್ಶನಗಳು, ಗೇಮ್‌ಗಳನ್ನ ಹಾಗೂ ಕ್ರ್ಯಾಶ್ ಕೋರ್ಸ್‌ಗಳನ್ನ ಆಯೋಜಿಸಲಾಗ್ತಿದೆ. ಬೀಜಿಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ಗಾರ್ಡನ್ ಪಾರ್ಟಿಯನ್ನ ಪ್ರದರ್ಶಿಸಲಾಗಿದೆ. ಇತ್ತ ಚೀನಾದ ಸರ್ಕಾರಿ ಮಾಲೀಕತ್ವದ ಸಿಂಗ್ವಾ ಯುನಿವರ್ಸಿಟಿಯಲ್ಲಿ, ವಿದೇಶಿ ಶಕ್ತಿಗಳ ವಿರುದ್ಧ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೇಗೆ ರಕ್ಷಣೆ ಕೊಡಬೇಕು ಅನ್ನೊ ಕುರಿತು ವಿಡಿಯೋಗಳನ್ನ ತೋರಿಸಲಾಗಿದೆ. ಇನ್ನೊಂದ್ ಕಡೆ ಬೀಹಾಂಗ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಿಗೆ ‘Who’s The Spy’ ಅಂದ್ರೆ ಗೂಢಚಾರ ಯಾರು? ಅನ್ನೊ ಟ್ರೈನಿಂಗ್ ಗೇಮ್ ಆಯೋಜಿಸಲಾಗಿದೆ. ಹೀಗೆ ಒಂದೊಂದು ಯುನಿವರ್ಸಿಟಿಯಲ್ಲಿ ಒಂದೊಂದು ರೀತಿ ಸ್ಪೈ ಕುರಿತು ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡಲಾಗ್ತಿದೆ. ಅಂದ್ಹಾಗೆ ಇದಕ್ಕೂ ಮುನ್ನ ದೇಶದಲ್ಲಿರೊ ಗೂಢಚಾರರ ಬಗ್ಗೆ ಮಾಹಿತಿ ಕೊಟ್ಟವರಿಗೆ 5 ಲಕ್ಷ ಯುಆನ್ ಅಂದ್ರೆ ಸುಮಾರು 55 ಲಕ್ಷ ರೂಪಾಯಿ ಕೊಡೋದಾಗಿ ಚೀನಾ ಸರ್ಕಾರ ಆಫರ್ ನೀಡಿತ್ತು.
-masthmagaa.com
Contact Us for Advertisement