ಕುಮಾರಸ್ವಾಮಿಗೆ ಯಡಿಯೂರಪ್ಪ ಮಾತಿನ ಡಿಚ್ಚಿ..!

ರಾಜ್ಯಕ್ಕೆ 2ನೇ ಹಂತದ ಪರಿಹಾರ ಬರೋದಿಲ್ಲ ಎಂದಿದ್ದ ಕುಮಾರಸ್ವಾಮಿಗೆ ಸಿಎಂ ಯಡಿಯೂರಪ್ಪ ಡಿಚ್ಚಿ ಕೊಟ್ಟಿದ್ದಾರೆ. ಚಿತ್ರದುರ್ಗದ ಮುರುಘಾಮಠದಲ್ಲಿ ಮಾತನಾಡಿದ ಅವರು, 2ನೇ ಕಂತಿನ ನೆರೆ ಪರಿಹಾರ ಬರುವುದಿಲ್ಲ ಅನ್ನೋದಕ್ಕೆ ಕುಮಾರಸ್ವಾಮಿ ಈ ದೇಶದ ಪ್ರಧಾನಿನಾ ಅಂತ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಅವರಿಗೆ ಅತೃಪ್ತಿ, ಅಸಮಾಧಾನ ಇರೋದ್ರಿಂದ ಹೀಗೆಲ್ಲಾ ಮಾತಾಡ್ತಾರೆ. ಆದ್ರೆ ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ಈ ರೀತಿ ಹೇಳಿಕೆ ನೀಡುವ ಮುನ್ನ 10 ಯೋಚಿಸಲಿ ಎಂದಿದ್ದಾರೆ.

ಇನ್ನು ರಾಜ್ಯದಲ್ಲಿ ಪ್ರವಾಹ ಪೀಡಿತರಿಗೆ ಮೊದಲು ನೆರವು ನೀಡಬೇಕು. ಹೀಗಾಗಿ ಬೇರೆ ಯೋಜನೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಸಾಧ್ಯವಿಲ್ಲ. ಶಾಸಕರು ಕೇಳುವ ಬೇರೆ ಯೋಜನೆಗಳಿಗೂ ಹಣ ನೀಡುವ ಸ್ಥಿತಿಯಲ್ಲಿ ಸರ್ಕಾರವಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಇನ್ನೆರಡು ತಿಂಗಳಲ್ಲಿ ಬೆಳೆಪರಿಹಾರ ನೀಡಲಾಗುತ್ತೆ ಎಂದು ಭರವಸೆ ನೀಡಿದ್ರು.

Contact Us for Advertisement

Leave a Reply