ಡೆಲ್ಲಿಯಲ್ಲಿ ಯಡಿಯೂರಪ್ಪ.. ಅನರ್ಹರ ಭವಿಷ್ಯಕ್ಕೆ ಸರ್ಕಸ್..!

ಉಪಚುನಾವಣೆ ಘೋಷಣೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅನರ್ಹ ಶಾಸಕರ ತಲೆಬಿಸಿ ಶುರುವಾಗಿದೆ. ಈ ಸಂಬಂಧ ರಾತ್ರೋರಾತ್ರಿ ದೆಹಲಿಗೆ ತೆರಳಿದ್ದು ಅಮಿತ್ ಶಾ ಭೇಟಿಯಾಗಿದ್ದಾರೆ. ಈ ವೇಳೆ ಅನರ್ಹ ಶಾಸಕರ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ ಭೇಟಿ ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಅನರ್ಹ ಶಾಸಕರ ಬಗ್ಗೆ ಏನೂ ಚರ್ಚೆ ನಡೆಸಿಲ್ಲ ಅಂತ ಹೇಳಿದ್ದಾರೆ.

ಇನ್ನು ಅನರ್ಹ ಶಾಸಕರು ಕೂಡ ದೆಹಲಿಗೆ ತೆರಳಿದ್ದು, ವಕೀಲರನ್ನು ಭೇಟಿಯಾಗಲಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ನಾಳೆ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರಲಿದ್ದು, ಅನರ್ಹರ ಭವಿಷ್ಯ ನಿರ್ಧರವಾಗಲಿದೆ. ಸುಪ್ರೀಂಕೋರ್ಟ್ ಸ್ಪೀಕರ್ ಆದೇಶಕ್ಕೆ ತಡೆ ನೀಡಬೇಕು. ಅಥವಾ ಪ್ರಕರಣ ಇತ್ಯರ್ಥವಾಗುವವರೆಗೆ ಚುನಾವಣೆಗೆ ತಡೆ ನೀಡಬೇಕು. ಎರಡರಲ್ಲಿ ಒಂದಾದರೂ ಆದರೆ ಅನರ್ಹರಿಗೆ ರಿಲೀಫ್ ಸಿಗಲಿದೆ. ಹೀಗಾಗಿ ನಾಳೆ ಅನರ್ಹ ಶಾಸಕರ ರಾಜಕೀಯ ಭವಿಷ್ಯಕ್ಕೆ ನಿರ್ಣಾಯಕ ದಿನವಾಗಿದೆ.

Contact Us for Advertisement

Leave a Reply