ಮಹಾರಾಷ್ಟ್ರಕ್ಕೆ ನೀರು ಬಿಡ್ತೀನಿ ಎಂದಿದ್ದು ನಿಜ: ಯಡಿಯೂರಪ್ಪ

ಕಲಬುರಗಿ: ನಿನ್ನೆ ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ ನೀರು ಬಿಡೋದಾಗಿ ಹೇಳಿದ್ದು ನಿಮಗೆಲ್ಲಾ ಗೊತ್ತಿದೆ. ಆದ್ರೆ ತಮ್ಮ ಹೇಳಿಕೆಯನ್ನು ದೃಢಪಡಿಸಿರುವ ಯಡಿಯೂರಪ್ಪ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಪರಸ್ಪರ ಶತ್ರುಗಳಲ್ಲ. ತೀವ್ರ ಬೇಸಿಗೆಯಲ್ಲಿ ಕರ್ನಾಟಕದ ಜನರು ಮಹಾರಾಷ್ಟ್ರದಿಂದ ನೀರನ್ನು ಕೇಳುತ್ತಿದ್ದಾರೆ. ಅದೇ ರೀತಿ ಅನಿವಾರ್ಯತೆ ಇರೋವಾಗ ಮಹಾರಾಷ್ಟ್ರದವರು ಕೂಡ ಕರ್ನಾಟಕದಿಂದ ನೀರು ಕೇಳುತ್ತಿದ್ದಾರೆ ಅದ್ರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದ ಜಟ್ಟಾ ತಾಲೂಕಿನಲ್ಲಿ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಮಹಾರಾಷ್ಟ್ರದ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಅಲಮಟ್ಟಿ ಅಣೆಕಟ್ಟಿನಿಂದ ನೀರು ತಿರುಗಿಸಲಾಗುವುದು ಎಂದು ಹೇಳಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Contact Us for Advertisement

Leave a Reply