ಯಡಿಯೂರಪ್ಪ ವಿರುದ್ಧ ಅನರ್ಹ ಶಾಸಕರು ಕೆಂಡ

ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದಿರುವ ಚುನಾವಣಾ ಆಯೋಗದ ನಿರ್ಧಾರದಿಂದ ಅನರ್ಹ ಶಾಸಕರಿಗೆ ಶಾಕ್ ಆಗಿದೆ. ಇದ್ರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಬೆಂಗಳೂರಿನ ಅರಣ್ಯ ಭವನದಲ್ಲಿ ಯಡಿಯೂರಪ್ಪ ಸಭೆ ನಡೆಸಿದ್ರು. ಸಭೆಯಲ್ಲಿ ಅನರ್ಹ ಅನರ್ಹ ಶಾಸಕರು, ಯಡಿಯೂರಪ್ಪ, ಮಾಧುಸ್ವಾಮಿ, ಲಕ್ಷ್ಮಣ್ ಸವದಿ, ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ರು.

ಈ ವೇಳೆ ಅನರ್ಹ ಶಾಸಕರು ಯಡಿಯೂರಪ್ಪ ಎದುರೇ ಕೂಗಾಡಿದ್ದಾರೆ. ಏರುಧ್ವನಿಯಲ್ಲೇ ಮಾತನಾಡಿದ ಶಾಸಕರು, ನಾವು ನಿಮ್ಮನ್ನು ನಂಬಿ ರಾಜೀನಾಮೆ ಕೊಟ್ಟಿದ್ದೆವು. ಈಗ ನಾವು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ನಮಗೆ ಒಂದು ತೊಟ್ಟು ವಿಷ ಕೊಟ್ಟು ಬಿಡಿ. ನಾವು ಬಂದಿದ್ದಕ್ಕೆ ನೀವು ಸಿಎಂ ಆಗಿದ್ದೀರಿ. ಆದ್ರೆ ಎಲ್ಲರೂ ಸೇರಿಕೊಂಡು ನಮ್ಮನ್ನು ಮುಗಿಸಿಬಿಟ್ರಿ. ರಾಜಕೀಯವಾಗಿ ನಾವು ಸತ್ತೇ ಹೋಗಿದ್ದೇವೆ. ನಮ್ಮ ಬಾಯಿಗೆ ಮಣ್ಣು ಹಾಕಿಬಿಡಿ ಎಂದು ಏರುಧ್ವನಿಯಲ್ಲಿ ಕೂಗಾಡಿದ್ದಾರೆ.

ಈ ವೇಳೆ ಯಡಿಯೂರಪ್ಪ ಅನರ್ಹ ಶಾಸಕರನ್ನು ಸಮಾಧಾನಪಡಿಸಲು ಯತ್ನಿಸಿದ್ರು. ಏನೂ ಆಗಲ್ಲ. ನೀವೇ ಚುನಾವಣೆ ನಿಲ್ಲೋದು ಹೆದರಬೇಡಿ ಅಂದ್ರು. ಆದ್ರೆ ಸಂಜೀವ್ ಕುಮಾರ್ ನಾವು ಎಲೆಕ್ಷನ್‍ಗೆ ನಿಲ್ಲಲು ಆಗಲ್ಲ ಎಂದು ಹೇಳಿದ್ದಾರಲ್ಲ ಎಂದು ಅನರ್ಹರು ಕೇಳಿದಾಗ ಸಿಎಂ ಸುಮ್ಮನಾಗಿದ್ದಾರೆ. ಸಿಎಂ ಜೊತೆಗಿದ್ದ ಬಿಜೆಪಿ ಟ್ರಬಲ್ ಶೂಟರ್ ಮಾಧುಸ್ವಾಮಿ ಕೂಡೇ ಅಲ್ಲೇ ಇದ್ದರೂ ಸೈಲೆಂಟ್ ಇದ್ದರು ಎನ್ನಲಾಗಿದೆ.

Contact Us for Advertisement

Leave a Reply