ನಮ್ಮ ಅಭ್ಯರ್ಥಿ ಯಾರಂತ ರಾಜ್ಯಾಧ್ಯಕ್ಷರು ಹೇಳ್ತಾರೆ: ಯಡಿಯೂರಪ್ಪ

ನಾಳೆಯೇ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾಳೆಯೇ ಚುನಾವಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ರಾಜ್ಯಾಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಈಗಾಗಲೇ ನಾನು ಮತ್ತು ಅವರು ನಮ್ಮ ಅಭ್ಯರ್ಥಿ ಯಾರಾಗಬೇಕೆಂದು ಮಾತನಾಡಿಕೊಂಡಿದ್ದೇವೆ. ನಮ್ಮ ಅಭ್ಯರ್ಥಿ ಯಾರು ಎಂದು ನಾಳೆ ಹೇಳುತ್ತಾರೆ ಎಂದು ತಿಳಿಸಿದ್ರು. ಚುನಾವಣೆ ಮುಂದೂಡಿಕೆ ಬಗ್ಗೆ ಮಾತನಾಡಿ ಸ್ಥಾಯಿ ಸಮಿತಿ ಚುನಾವಣೆಯನ್ನು ಹೈಕೋರ್ಟ್ ಮುಂದೂಡಿತ್ತು. ಹೀಗಾಗಿ ಅದರ ಜೊತೆಗೆ ಈ ಚುನಾವಣೆ ನಡೆಸೋಣ ಅಂತ ನಾವು ಅಂದುಕೊಂಡಿದ್ವಿ ಎಂದು ಸಮಜಾಯಿಷಿ ನೀಡಿದ್ರು.

Contact Us for Advertisement

Leave a Reply