ಸಿಎಂ ಆದಾಗಿನಿಂದಲೂ ಅಗ್ನಿಪರೀಕ್ಷೆ: ಯಡಿಯೂರಪ್ಪ ಬೇಸರ

ಸಿಎಂ ಆದಾಗಿನಿಂದಲೂ ಅಗ್ನಿ ಪರೀಕ್ಷೆ ಎದುರಾಗಿದೆ ಅಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಚಿತ್ರದುರ್ಗದ ಸಿರಿಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆ ಇದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಬರ ಇದೆ. ಪ್ರವಾಹದಿಂದಾಗಿ ಲಕ್ಷಾಂತರ ಮನೆಗಳು ನೆಲಸಮವಾಗಿವೆ. ನೆರೆಪೀಡಿತರಿಗೆ ನೆರವು ನೀಡಿ ನೆಮ್ಮದಿ ಜೀವನಕ್ಕೆ ವ್ಯವಸ್ಥೆ ಮಾಡಿಕೊಡಬೇಕಿದೆ. ಕೇಂದ್ರದಿಂದ ನಾಲ್ಕೈದು ದಿನಗಳಲ್ಲಿ ಪರಿಹಾರ ಬರೋ ವಿಶ್ವಾಸ ಇದೆ. ಅಲ್ಲದೆ ರಾಜ್ಯ ಸರ್ಕಾರದ ಕೆಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತೆ ಅಂದ್ರು. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಘೋಷಿಸಲಾಗಿದ್ದು, ಈಗಾಗಲೇ ಫೌಂಡೇಶನ್‍ಗೆ 1 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಮನೆ ಹಾನಿಯಾದವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತೆ. ಅದರಲ್ಲಿ ಈಗಾಗಲೇ 25 ಸಾವಿರ ಬಿಡುಗಡೆಯಾಗಿದೆ ಅಂದ್ರು. ಇನ್ನು ಹಿಂದಿನ ಸರ್ಕಾರ ಮಾಡಿದ್ದ ಸಾಲಮನ್ನಾ ಯೋಜನೆಯನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗೋದಾಗಿ ಹೇಳಿದ್ದಾರೆ.

Contact Us for Advertisement

Leave a Reply