ನಾವ್ ಚೆನ್ನಾಗಿದ್ದೇವೆ..ಬೆಂಕಿ ಹಚ್ಬೇಡಿ: ಯಡಿಯೂರಪ್ಪ ಕೆಂಡ

ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಬಂಧ ಹಳಸಿದೆ ಅನ್ನೋ ಮಾತಿಗೆ ಯಡಿಯೂರಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಮೈಸೂರಲ್ಲಿ ಮಾತನಾಡಿದ ಯಡಿಯೂರಪ್ಪ, ನನ್ನ ಮತ್ತು ನಳಿನ್ ಕುಮಾರ್ ಕಟೀಲ್ ಸಂಬಂಧ ಚೆನ್ನಾಗಿದೆ. ದಯವಿಟ್ಟು ನಮ್ಮ ನಡುವೆ ಬೆಂಕಿ ಹಚ್ಚುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದ್ರು. ಜೊತೆಗೆ ನಮ್ಮಲ್ಲಿ ಎಲ್ಲ ವಿಚಾರದಲ್ಲೂ ಹೊಂದಾಣಿಕೆ ಇದೆ. ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಚಾರದಲ್ಲೂ ಒಟ್ಟಾಗಿ ಚರ್ಚಿಸಿಯೇ ನಿರ್ಧಾರ ಮಾಡಿದ್ದೆವು. ಚುನಾವಣೆ ಮುಂದೂಡುವ ಬಗ್ಗೆಯೂ ಇಬ್ಬರು ಸೇರಿಯೇ ಪ್ಲಾನ್ ಮಾಡಿದ್ದೆವು. ಆದ್ರೆ ಚುನಾವಣೆ ಮುಂದೂಡಲು ನಾವು ಚಿಂತಿಸಿದ್ದು ನಿಜ, ಆದ್ರೆ ಅಧಿಕಾರಿಗಳು ಇದು ಸಾಧ್ಯವಿಲ್ಲ ಎಂದು ಇವತ್ತೇ ಚುನಾವಣೆ ನಡೆಸಿದರು. ನಳಿನ್ ಕುಮಾರ್ ಅಧ್ಯಕ್ಷರಾದ ನಂತರ ಇದು ಅವರಿಗೆ ಸಿಕ್ಕ ಮೊದಲ ಗೆಲುವು ಎಂದು ಯಡಿಯೂರಪ್ಪ ಹೇಳಿದ್ದಾರೆ.

Contact Us for Advertisement

Leave a Reply