ಅಧಿಕಾರ ಸಿಗದಿದ್ದರೆ ಸತ್ತೇ ಹೋಗುತ್ತಿದ್ದ: ಬಿಎಸ್‍ವೈ ಬಗ್ಗೆ ನಾಲಗೆ ಹರಿಬಿಟ್ಟ ಜೆಡಿಎಸ್ ನಾಯಕ

ಸಿಎಂ ಯಡಿಯೂರಪ್ಪ ವಿರುದ್ಧ ಜೆಡಿಎಸ್ ನಾಯಕ ಎಸ್.ಆರ್.ಶ್ರೀನಿವಾಸ್ ನಾಲಗೆ ಹರಿಬಿಟ್ಟಿದ್ದಾರೆ. ಅಧಿಕಾರ ಸಿಗದೇ ಇದ್ದಿದ್ದರೆ ಸತ್ತೇ ಹೋಗುತ್ತಿದ್ದ ಎಂದು ಯಡಿಯೂರಪ್ಪ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಅಲ್ಲದೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆಯ ಅಂಗಡಿ ಇಟ್ಟಿದ್ದಾರೆ. ಬಿ.ಎಸ್.ಯಡಿಯೂರಪ್ಪನವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಅವರು ಏನ್ ಹೇಳ್ತಾರೋ ಅವರಿಗೇ ಗೊತ್ತಾಗಲ್ಲ. ಅಮಿತ್ ಶಾ ಮುಂದೆ ಹೋಗಿ ನಿಲ್ಲುವ ಧೈರ್ಯವೂ ಅವರಿಗೆ ಇಲ್ಲ. ಕಳ್ಳನಿಗೆ ಮತ ಹಾಕಿ ಅಧಿಕಾರ ಕೊಟ್ಟಂತಾಗಿದೆ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇನ್ನು ರಾಜ್ಯದ 25 ಮಂದಿ ಬಿಜೆಪಿ ಸಂಸದರ ಪೈಕಿ ಮೋದಿ ಮುಂದೆ ನಿಲ್ಲೋ ಗಂಡಸು ಒಬ್ಬನೂ ಇಲ್ಲ. ಎಲ್ಲರೂ ಸೇರಿ ತುಮಕೂರಿನಲ್ಲಿ ನೀಚನನ್ನು ಗೆಲ್ಲಿಸಿದ್ರಿ. ತಾಕತ್ ಇದ್ದರೆ ಜಿ.ಎಸ್.ಬಸವರಾಜು ನನ್ನ ಮುಂದೆ ಬಂದು ಮಾತನಾಡಲಿ ಅಂತ ಹೇಳಿದ್ದಾರೆ.

Contact Us for Advertisement

Leave a Reply