masthmagaa.com:
ಕತಾರ್ನಲ್ಲಿ ಫಿಫಾ ವರ್ಲ್ಡ್ ಕಪ್ ನಡೆದು 5 ತಿಂಗಳು ಕಳೆದಿವೆ. ಆದ್ರೆ ಟೂರ್ನಿಯ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದ ವಲಸೆ ಕಾರ್ಮಿಕರಿಗೆ ಮಾತ್ರ ಸರಿಯಾದ ವೇತನೆ ನೀಡದೆ, ಅವ್ರನ್ನ ಜೈಲಿನಲ್ಲಿಡಲಾಗಿದೆ ಅಂತ ತಿಳಿದು ಬಂದಿದೆ. ಮೂರು ಜನ ಭದ್ರತಾ ಸಿಬ್ಬಂದಿ ತಮಗೆ ಪಾವತಿಯಾಗದ ವೇತನವನ್ನ ಪಡೆಯಲು ಪ್ರಯತ್ನಿಸುವಾಗ ಬಂಧಿಸಲಾಗಿದೆ ಅಂತ ವರದಿಯಾಗಿದೆ. ಇದ್ರಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಹಾಗೂ ಭಾರತೀಯ ಮೂಲದ ಓರ್ವ ಸೆಕ್ಯುರಿಟಿ ಗಾರ್ಡ್ ಸೇರಿದ್ದಾರೆ. ಈ ಮೂರು ಜನಕ್ಕೆ 6 ತಿಂಗಳ ಜೈಲು ಶಿಕ್ಷೆ ಜೊತೆಗೆ ತಲಾ 2.20 ಲಕ್ಷ ರೂಪಾಯಿ ದಂಡವನ್ನ ಕೂಡ ವಿಧಿಸಲಾಗಿದೆ ಅಂತ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಬಂಧಿತ ವಲಸೆ ಕೆಲಸಗಾರರನ್ನ ಕೂಡಲೇ ರಿಲೀಸ್ ಮಾಡ್ಬೇಕು ಅಂತ ಮಾನವ ಹಕ್ಕುಗಳ ಸಂಸ್ಥೆ Equidem ಒತ್ತಾಯಿಸಿದೆ.
-masthmagaa.com
Contact Us for Advertisement