masthmagaa.com: ನಾಳೆ, ಅಂದ್ರೆ ಅಕ್ಟೋಬರ್ 25ರಿಂದ ರಾಜ್ಯಾದ್ಯಂತ 1 ರಿಂದ 5ನೇ ತರಗತಿ ಶಾಲೆ ಓಪನ್ ಆಗ್ತಿದೆ. ಸುಮಾರು 20 ತಿಂಗಳ ಬಳಿಕ ಶಾಲೆಗಳಲ್ಲಿ ಮತ್ತೆ ಪುಟ್ಟ ಮಕ್ಕಳು ಕಾಣಿಸಿಕೊಳ್ತಾರೆ. ಕೊರೋನ ನಿಯಂತ್ರಣಕ್ಕೆ ಬಂದಿದೆ ಅಂತ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದ್ರೆ ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿರೋ ಕೋವಿಡ್‌ ಮಾರ್ಗಸೂಚಿಯನ್ನ ಕಟ್ಟು ನಿಟ್ಟಾಗಿ ಪಾಲಿಸ್ಬೇಕು ಅಂತ ಸೂಚಿಸಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಮುಂಬೈ ಕರ್ನಾಟಕವನ್ನ ಕಿತ್ತೂರು ಕರ್ನಾಟಕವಾಗಿ ಘೋಷಿಸುವ ನಿರ್ಧಾರವನ್ನ ಸರ್ಕಾರ ಕೈಗೊಂಡಿದೆ. ಈ ಹಿಂದೆ ಹೈದರಾಬಾದ್‌ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ ಅಂತ ಘೋಷಿಸಲಾಗಿತ್ತು. ಇದೀಗ ಕಿತ್ತೂರು ಉತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂಬೈ ಕರ್ನಾಟಕವನ್ನ ಕಿತ್ತೂರು ಕರ್ನಾಟಕ ಅಂತ ಘೋಷಿಸಲಾಗುತ್ತೆ ಅಂತ ಭರವಸೆ ಕೊಟ್ಟಿದ್ದಾರೆ. -masthmagaa.com:   Share on: WhatsAppContact Us for AdvertisementRead More →

masthmagaa.com: ರಾಜ್ಯದ ಕೆಲವೊಂದುಕಡೆ ಇವತ್ತು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಡಗಣಿಯಲ್ಲಿ ಅತಿಹೆಚ್ಚು 119 ಮಿಲಿ ಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಕೆಲವೊಂದುಕಡೆ ಭಾರಿ ಮಳೆ, ಬಹುತೇಕ ಕಡೆ ಸಾಧರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನ ಬಹುತೇಕ ಕಡೆ ಸಾಧಾರಣ ಮಳೆಯಾಗೋ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಿಜೆಪಿಯವರು 7 ಕೆಜಿ ರೇಷನ್ ಅಕ್ಕಿಯನ್ನ 5 ಕೆಜಿಗೆ ಇಳಿಸಿದ್ದಾರೆ ಅಂತ ಹೇಳಿದ್ದ ಸಿದ್ದರಾಮಯ್ಯಗೆ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ತಾವು ಅಧಿಕಾರಕ್ಕೆ ಬಂದ ಮೇಲೆಯೇ ರೇಷನ್ ಕೊಡ್ತಿದ್ದಾರೆ ಅನ್ನೋ ರೀತಿ ಮಾತಾಡ್ತಿದ್ದಾರೆ. ರೇಷನ್ ಕೊಡೋ ವ್ಯವಸ್ಥೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ರಾಜ್ಯ ಸರ್ಕಾರ ಕೊಡ್ತಿರೋ ಅಕ್ಕಿಯನ್ನ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 32 ರೂಪಾಯಿ ದರದಲ್ಲಿ ಖರೀದಿಸುತ್ತೆ. ಇದರಲ್ಲಿ 29 ರೂಪಾಯಿಯನ್ನ ಕೇಂದ್ರ ಸರ್ಕಾರ ಭರಿಸುತ್ತೆ. ಉಳಿದ ಮೂರು ರೂಪಾಯಿಯನ್ನ ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ಕೊಟ್ಟಿದ್ರು, ಈಗ ನಮ್ಮ ಸರ್ಕಾರ ಕೊಡ್ತಿದೆ. 3 ರೂಪಾಯಿ ದೊಡ್ಡದಾ, 29 ರೂಪಾಯಿ ದೊಡ್ಡದಾ? 29 ರೂಪಾಯಿ ಕೊಟ್ಟೋರನ್ನ ಬಿಟ್ಟು, ಮೂರು ರೂಪಾಯಿ ಕೊಟ್ಟ ತಮ್ಮ ಫೋಟೋ ಹಾಕಿಸಿ ಅನ್ನಭಾಗ್ಯ ಮಾಡಿದ್ರು ಅಂತ ಸಿಎಂ ಬೊಮ್ಮಾಯಿ ಹೇಳಿದ್ರು. -masthmagaa.com Share on: WhatsAppContact Us for AdvertisementRead More →

masthmagaa.com: ಬೆಂಗಳೂರಲ್ಲಿ ವರುಣನ ಆರ್ಭಟದಿಂದ ಉಂಟಾಗಿರುವ ಸಮಸ್ಯೆ ಒಂದೆರಡಲ್ಲ. ಇದೀಗ ಬೆಂಗಳೂರಿನ ಎಂ ಜಿ ರೋಡ್ನ ಪೆಟ್ರೋಲ್​​ ಬಂಕ್‌ ಒಂದರಲ್ಲಿ ಪೆಟ್ರೋಲ್ಗೆ ಮಳೆ ನೀರು ಮಿಕ್ಸ್‌ ಆಗಿದೆ. ಇದು ಗೊತ್ತಿಲ್ಲದೆ ತಮ್ಮ ವಾಹನಗಳಿಗೆ ಪೆಟ್ರೋಲ್‌ ಹಾಕಿಸಿಕೊಂಡ ಜನರ ವಾಹನಗಳ ಇಂಜಿನ್‌ಗೆ ಸಮಸ್ಯೆ ಆಗಿದೆ. ನಂತ್ರ ಈ ವಿಚಾರ ಗೊತ್ತಾದ ಬಳಿಗೆ ವಾಹನ ಮಾಲೀಕರು ಪೆಟ್ರೋಲ್‌ ಬಂಕ್‌ ಬಳಿ ಬಂದು ಗಲಾಟೆ ಮಾಡಿದ್ದಾರೆ. ಬಂಕ್‌ ಮಾಲಿಕರು ವಾಹನಗಳನ್ನ ರಿಪೇರಿ ಮಾಡಿಸಿಕೊಟ್ಟಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಕೊರೋನಾ ಹಾವಳಿ, ಲಾಕ್​ಡೌನ್​ ಅಂತೆಲ್ಲಾ ವಾಹನ ಸಂಚಾರ ಬಂದ್ ಆಗಿತ್ತು. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪೆಟ್ರೋಲ್​-ಡೀಸೆಲ್​ ಮೇಲಿನ ತೆರಿಗೆಯಿಂದ ಬರ್ತಿದ್ದ ಆದಾಯ ಕೂಡ ಖೋತಾ ಆಗಿತ್ತು. ಆದ್ರೀಗ ಕೊರೋನಾ ಕಮ್ಮಿಯಾಗಿ, ಎಲ್ಲಾ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯ ಸರ್ಕಾರಕ್ಕೆ ಬಂಪರ್​ ಆದಾಯ ಬಂದಿದೆ. ಈ ವರ್ಷದ ಏಪ್ರಿಲ್​ 1ರಿಂದ ಸೆಪ್ಟೆಂಬರ್​ 30ರವರೆಗೆ ಪೆಟ್ರೋಲ್​-ಡೀಸೆಲ್​ ಮೇಲಿನ ಟ್ಯಾಕ್ಸ್​ನಿಂದ 9,720 ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಬಂದ ಆದಾಯಕ್ಕಿಂತ 48 ಪರ್ಸೆಂಟ್ ಹೆಚ್ಚು. ಪೆಟ್ರೋಲ್ ಮತ್ತು ಡೀಸೆಲ್​ ರೇಟ್​ ಈಗಿರುವಷ್ಟೇ ಇದ್ರೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ 20,000 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಅಂತ ಕಮರ್ಷಿಯಲ್​ ಟ್ಯಾಕ್ಸ್ ಡಿಪಾರ್ಟ್​ಮೆಂಟ್​​ನ ಅಧಿಕಾರಿಯೊಬ್ಬರು ಹೇಳಿದ್ದಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಪೆಟ್ರೋಲ್​ ಮೇಲೆ ರಾಜ್ಯ ಸರ್ಕಾರ 35 ಪರ್ಸೆಂಟ್​ ಮತ್ತು ಡೀಸೆಲ್​ ಮೆಲೆRead More →

masthmagaa.com: ರಾಜ್ಯದಲ್ಲಿ ಇಂದು 378 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 11 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,85,227 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,995 ಆಗಿದೆ. ಇಂದು 464 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,38,312 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 8,891 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.03 ಲಕ್ಷಕ್ಕು ಅಧಿಕ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.99 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 6.28 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ. ಇಂದು ಮೃತಪಟ್ಟವರು: ಬೆಂಗಳೂರು ನಗರ 7 ದಾವಣಗೆರೆ 1 ಧಾರವಾಡ 1 ಕೋಲಾರ 1 ತುಮಕೂರು 1 -masthmagaa.com Share on: WhatsAppContact Us for AdvertisementRead More →

masthmagaa.com: ಬಿಜೆಪಿ ಮತ್ತು ಕುಮಾರಸ್ವಾಮಿ ನಡುವೆ ವೈಯಕ್ತಿಕ ಟಾಕ್​ ಫೈಟ್​ ಮುಂದುವರಿದಿದೆ. ಇವತ್ತು ಮತ್ತೆ ಟ್ವೀಟ್​ ಮಾಡಿರೋ ರಾಜ್ಯ ಬಿಜೆಪಿ, ‘ಮಾನ್ಯ ಕುಮಾರಸ್ವಾಮಿಯವರೇ ನೀವು ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು. ನನ್ನ ಬದುಕು ತೆರೆದ ಪುಸ್ತಕ, ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಅಂತ ಹೇಳೋ ನಿಮ್ಮ ಧೈರ್ಯ ಅಭಿನಂದನೀಯ. ಆದ್ರೆ ಕಾನೂನು ಪ್ರಕಾರ ‘ಪಾರದರ್ಶಕ ಕಾಯ್ದೆ’ ಉಲ್ಲಂಘನೆಯೂ ಅಪರಾಧವಲ್ಲವೇ? ತೆರೆದ ಪುಸ್ತಕ, ತೆರೆದ ಬಾವಿಯಷ್ಟೇ ಅಪಾಯವಂತೆ! ಅಂತ ಹೇಳಿದೆ. ಕುಮಾರಸ್ವಾಮಿ ಸುಮ್ನಿರ್ತಾರಾ, ಅವರು ಕೂಡ ತಿರುಗೇಟು ಕೊಟ್ಟಿದ್ದಾರೆ. ‘ನಾನು ಯಾವುದೇ ಕುಟುಂಬವನ್ನ ಹಾಳು ಮಾಡಿಲ್ಲ. ಕೆಪಿಎಸ್​​ಸಿಯಲ್ಲಿ ಆಯ್ಕೆಯಾದ ಅಧಿಕಾರಿಯೊಬ್ಬರ ಪತಿ ಕೆಆರ್​ಎಸ್​ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ್ರು. ಯಾರಿಂದ ಬಿದ್ರು, ಯಾಕೆ ಆತ್ಮಹತ್ಯೆ ಮಾಡಿಕೊಂಡ್ರು, ಇದಕ್ಕೆ ಕಾರಣೀಕರ್ತರು ಯಾರು, ಆ ಫ್ಯಾಮಿಲಿಯನ್ನ ಹಾಳು ಮಾಡಿದ್ದು ಯಾರು ಅಂತ ಸಿಟಿ ರವಿ ಸ್ವಲ್ಪ ಸ್ಮರಿಸಿಕೊಳ್ಳಲಿ. ಇಂಥಾ ಹಲ್ಕಾ ಕೆಲಸ ನಾನು ಮಾಡಿಲ್ಲ. ಆರ್​ಎಸ್​​ಎಸ್​ ಸಂಚಾಲಕರ ಮಕ್ಕಳನ್ನೇ ಕ್ಯಾರಿಯಿಂಗ್ ಮಾಡಿ ಬಾಂಬೆಗೆ ಕದ್ದು ಓಡಿದ್ರಲಾ ಇದರ ಬಗ್ಗೆ ನಳಿನ್​ ಕುಮಾರ್ ಕಟೀಲ್​ ಏನಾದ್ರೂ ಹೇಳ್ತಾರಾ?Read More →

masthmagaa.com: ಜಮ್ಮು ಕಾಶ್ಮೀರದ ಶೋಪಿಯಾನ್​​ನಲ್ಲಿ ಇವತ್ತು ಲಷ್ಕರ್ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್​​​ನ​ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರಲ್ಲಿ ಒಬ್ಬ ಆದಿಲ್ ವಾನಿ.. ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಕಾರ್ಪೆಂಟರ್ ಹತ್ಯೆಯಲ್ಲಿ ಈತನ ಕೈವಾಡ ಇತ್ತು ಅಂತ ಕಾಶ್ಮೀರ ಝೋನ್ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಶೋಪಿಯಾನ್​ನ ದ್ರಗಡ್​​​ನಲ್ಲಿ ಉಗ್ರರು ಅಡಗಿರೋ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಕಾರ್ಯಾಚರಣೆ ನಡೆಸಿದ ಯೋಧರು, ದುಷ್ಟರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 2 ವಾರದಲ್ಲಿ 15 ಉಗ್ರರನ್ನು ಹೊಡೆದುರುಳಿಸಿದಂತಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನೆ ದಾಳಿ ಮತ್ತು ಅದಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ 11 ಕಡೆ ಇವತ್ತು ಎನ್​ಐಎ ದಾಳಿ ನಡೆಸ್ತು. ಶ್ರೀನಗರ, ಬಾರಾಮುಲ್ಲಾ, ಪುಲ್ವಾಮಾ, ಅವಂತಿಪೋರಾ, ಸೋಪೋರ್​ ಮತ್ತು ಕುಲ್ಗಾಂಗಳಲ್ಲಿ ಈ ದಾಳಿ ನಡೆದಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ರಾಜ್ಯದ ಕೆಲವೊಂದು ಕಡೆ ಇವತ್ತು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಹಾಸನ ಜಿಲ್ಲೆ ಆಲೂರು ತಾಲೂಕಿನ ದೊಡ್ಡಕಣಗಲ್​​ನಲ್ಲಿ ಅತಿಹೆಚ್ಚು ಅಂದ್ರೆ ಜಸ್ಟ್ 9 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ, ದಕ್ಷಿಣ ಒಳನಾಡು ಮತ್ತು ಮಳೆನಾಡು ಜಿಲ್ಲೆಗಳ ಕೆಲವೊಂದು ಕಡೆ ಭಾರಿ ಮಳೆ, ಬಹುತೇಕ ಕಡೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳ ಕೆಲವೊಂದು ಕಡೆ ಸಣ್ಣ ಪ್ರಮಾಣದ ಮಳೆಯಾಗಲಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. -masthmagaa.com Share on: WhatsAppContact Us for AdvertisementRead More →