ಶೆಂಜೌ-18 ಮಿಷನ್‌: 3 ಗಗನಯಾತ್ರಿಗಳನ್ನ ಲಾಂಚ್‌ ಮಾಡಿದ ಚೀನಾ

masthmagaa.com:

ಚೀನಾದ ಶೆಂಜೌ-18 (Shenzhou-18) ಮಿಷನ್‌ನ ಭಾಗವಾಗಿ ಇದೀಗ 3 ಗಗನಯಾತ್ರಿಗಳನ್ನ ಚೀನಾ ಬಾಹ್ಯಾಕಾಶಕ್ಕೆ ಕಳಿಸಿಕೊಟ್ಟಿದೆ. ಚೀನಾ ನಿರ್ಮಿತ ಸ್ಪೇಸ್‌ ಸ್ಟೇಷನ್‌ ʻಟಿಯಾಂಗಾಂಗ್‌ʼ (Tiangong Space Station) ಕಡೆ ಯಶಸ್ವಿಯಾಗಿ ಪ್ರಯಾಣ ಆರಂಭ ಮಾಡಲಾಗಿದೆ ಅಂತ ಚೀನಾ ಹೇಳಿದೆ. ಇದು 2030ರೊಳಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನ ಲ್ಯಾಂಡ್‌ ಮಾಡೋ ಚೀನಾದ ಮಹಾತ್ವಾಕಾಂಕ್ಷೆಯ ಸ್ಪೇಸ್‌ ಪ್ರೋಗ್ರಾಮ್‌ನ ಒಂದು ಭಾಗವಾಗಿದ್ದು ಜಿಯುಖಾನ್‌ ಸ್ಯಾಟಲೈಟ್‌ ಲಾಂಚ್‌ ಸೆಂಟರ್‌ನಿಂದ ಪ್ರೊಗ್ರಾಂ ಲಾಂಚ್‌ ಮಾಡಲಾಗಿದೆ. ಅಂದ್ಹಾಗೆ ಈ 3 ಗಗನಯಾತ್ರಿಗಳು ಸುಮಾರು 6 ತಿಂಗಳ ಕಾಲ ಸ್ಪೇಸ್‌ ಸ್ಟೇಷನ್‌ನಲ್ಲಿ ಕಾಲ ಕಳೆಯಲಿದ್ದಾರೆ. ಈ ವೇಳೆ ಕೆಲ ಸಂಶೋಧನೆ ಕೈಗೊಳ್ಳಲಿದ್ದಾರೆ. ಬಾಹ್ಯಾಕಾಶದ ಅವಶೇಷಗಳಿಂದ ರಕ್ಷಣೆ ನೀಡೋಕೆ ಸ್ಪೇಸ್‌ ಸ್ಟೇಷನಲ್ಲೊಂದು ಸಾಧನವನ್ನ ಅಳವಡಿಸಲಿದ್ದಾರೆ, ಪೇಲೋಡ್‌ ಸಂಶೋಧನೆಗಳನ್ನ ನಡೆಸಲಿದ್ದಾರೆ. ಹೀಗೆ ಸಾಕಷ್ಟು ಯೋಜನೆಗಳನ್ನ ರೂಪಿಸಲಾಗಿದೆ ಅಂತ ಚೀನಾದ ಮ್ಯಾನ್ಡ್‌ ಸ್ಪೇಸ್‌ ಏಜೆನ್ಸಿಯ (CMSA) ಉಪ ನಿರ್ದೇಶಕರು ತಿಳಿಸಿದ್ದಾರೆ.

-nmasthmagaa.com

Contact Us for Advertisement

Leave a Reply