ಮಾರ್ಕೆಟ್:‌ 52 ವಾರಗಳ ಗರಿಷ್ಟ ಚಂಚಲತೆ ದಾಖಲು

masthmagaa.com:

ವಾರದ ಮೊದಲ ದಿನವೇ ಮಾರ್ಕೆಟ್‌ ನೀರಸವಾಗಿ ಫರ್ಮಾಮ್‌ ಮಾಡಿದೆ. ಮೂಲಸೌಕರ್ಯದ ಸಾಲಗಳ ಮೇಲೆ RBIನ ಹೊಸ ಮಸೂದೆಯಿಂದಾಗಿ ಸಾರ್ವಜನಿಕ ವಲಯದ ಉದ್ಯಮಗಳ ಸ್ಟಾಕ್‌ಗಳಿಗೆ ಹಾಗೂ ಅವಕ್ಕೆ ಸಂಬಂಧಿಸಿದ ಇಂಡೆಕ್ಸ್‌ಗಳಿಗೆ ಪೆಟ್ಟು ಬಿದ್ದಿದೆ. ಹೀಗಾಗಿ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ ಕೇವಲ 17 ಪಾಯಿಂಟ್‌ ಗಳಿಸಿ 73,896ಕ್ಕೆ ತಲುಪಿದ್ರೆ, ನಿಫ್ಟಿ 33 ಪಾಯಿಂಟ್‌ ಕಳೆದುಕೊಂಡು 22,443ಕ್ಕೆ ತಲುಪಿದೆ. ನಾಲ್ಕನೇ ತ್ರೈಮಾಸಿಕದ ಉತ್ತಮ ರಿಸಲ್ಟ್‌ಗಳಿಂದಾಗಿ ಬ್ರಿಟಾನಿಯಾ ಹಾಗೂ ಕೋಟಕ್‌ ಮಹಿಂದ್ರಾ ಬ್ಯಾಂಕ್‌ ಟಾಪ್‌ ಗೇನರ್‌ಗಳಾಗಿವೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 05 ಪೈಸೆ ಕಡಿಮೆಯಾಗಿ 83.50 ಆಗಿದೆ. (83 ರೂಪಾಯಿ 50 ಪೈಸೆ).

-masthmagaa.com

Contact Us for Advertisement

Leave a Reply