ಮಯನ್ಮಾರ್‌ನಲ್ಲಿ ಸರ್ಕಾರದ ನೆಲೆಗಳನ್ನೆ ವಶಕ್ಕೆ ಪಡೆದ ರೆಬಲ್‌ ಗುಂಪು!

masthmagaa.com:

ಮಿಲಟರಿ ಸರ್ಕಾರದ ವಿರುದ್ದ ಮಯನ್ಮಾರ್‌ನಲ್ಲಿ ಭುಗಿಲೆದ್ದಿರೊ ಹಿಂಸಾಚಾರ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಮಯನ್ಮಾರ್‌ನ ರಾಖೈನ್‌ ಪ್ರಾಂತ್ಯದಲ್ಲಿ ಅರಾಕನ್‌ ಆರ್ಮಿ ಅನ್ನೋ ಜನಾಂಗೀಯ ಸಶಸ್ತ್ರ ಸಂಘಟನೆ ಇದೀಗ ಅಲ್ಲಿನ ಬುತಿಡಾಂಗ್‌ ಸಿಟಿಯಲ್ಲಿರೊ ಜುಂಟಾ ಸರ್ಕಾರದ ಸೇನಾ ನೆಲೆಗಳನೆಲ್ಲಾ ವಶಪಡಿಸಿಕೊಂಡಿರೋದಾಗಿ ಹೇಳಿದೆ. ಅಲ್ದೇ ಬಾಂಗ್ಲಾದೇಶ, ಭಾರತದ ಗಡಿ ಉದ್ದಕ್ಕೂ ಇರೋ ಮಯನ್ಮಾರ್‌ನ ಪ್ರದೇಶವನ್ನೆಲ್ಲಾ ಈ ಸಂಘಟನೆ ತನ್ನ ಕಂಟ್ರೋಲ್‌ಗೆ ತಗೊಂಡಿದೆ ಅಂತ ವರದಿಯಾಗಿದೆ. ಈ ಮೂಲಕ ಆಡಳಿತ ವಿರೋಧಿ ಅಲೆ ಎದುರಿಸ್ತಿರೊ ಜುಂಟಾ ಸೇನಾ ಸರ್ಕಾರಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ. ಅಲ್ದೇ ಇದೇ ತಿಂಗಳ ಆರಂಭದಲ್ಲಿ ಅಲ್ಲಿನ ಬುತಿಡಾಂಗ್‌ ಮೇಲೆ ದಾಳಿ ನಡೆಸಿ ಸರ್ಕಾರದ ನೂರಾರು ಸೇನಾ ಸಿಬ್ಬಂದಿಯನ್ನ ಅರಾಕನ್‌ ಆರ್ಮಿ ಅರೆಸ್ಟ್‌ ಮಾಡಿತ್ತು. ಈಗ ಸಿಟಿಯನ್ನೇ ತನ್ನ ಕೈವಶ ಮಾಡ್ಕೊಂಬಿಟ್ಟಿದೆ. ಹೀಗಾಗಿ ಸದ್ಯ ರಾಖೈನ್‌ ಪ್ರಾಂತ್ಯದ ಸಂಪರ್ಕ ಕೂಡ ಬಹುತೇಕ ಸ್ಥಗಿತಗೊಂಡಿದೆ ಅಂತ ಮಾಹಿತಿ ಲಭ್ಯ ಆಗಿದೆ. ಅಂದ್ಹಾಗೆ ಅರಾಕನ್‌ ಆರ್ಮಿ ಹಾಗೂ ಜುಂಟಾ ಸೇನೆ ನಡುವೆ 2019ರಿಂದಲೂ ಸಂಘರ್ಷ ನಡಿತಾನೆ ಇದ್ದು, ಘಟನೆಯಿಂದಾಗಿ 2 ಲಕ್ಷಕ್ಕೂ ಅಧಿಕ ಜನ ಬೇರೆಡೆ ಸ್ಥಳಾಂತರಗೊಂಡು ಸಾವಿರಾರು ಜನ ಪ್ರಾಣ ಕಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply