ಇಸ್ರೇಲ್‌ ಹಮಾಸ್‌ ದಾಳಿ ಪ್ರತಿದಾಳಿ ತೀವ್ರ! ಅಬ್ಬರಿಸಿದ ಇಸ್ರೇಲ್‌ PM!

masthmagaa.com:

ಸತತ 8ನೇ ತಿಂಗಳು ಮುಂದುವರೆಯುತ್ತಿರೋ ಇಸ್ರೇಲ್‌ ಹಮಾಸ್ ಕದನದಲ್ಲಿ ಮತ್ತೊಂದು‌ ಮಹತ್ವದ ಬೆಳವಣಿಗೆಯಾಗಿದ್ದು ಶಾಂತಿಮಾತುಕತೆಗೆ ಎಳ್ಳುನೀರುಬಿಡುವಂತ ಘಟನೆ ನಡೆದಿದೆ. ಏನಾಗಿದೆ ಅಂದ್ರೆ ಇಸ್ರೇಲ್‌ ಮೇಲೆ ಹಮಾಸ್‌ ಮತ್ತೆ ಭೀಕರ ದಾಳಿ ನಡೆಸಿದೆ. 14 ರಾಕೆಟ್‌ಗಳನ್ನ ಇಸ್ರೇಲ್‌ ಮೇಲೆ ಹಾರಿಸಿದ್ದು ಪರಿಣಾಮ 3 ಇಸ್ರೇಲ್‌ ಸೈನಿಕರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಗಾಜಾದ ರಫಾ ನಗರದ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌ ನಡೆಸಿದೆ. ಈ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಸಧ್ಯ ಈ ದಾಳಿ ಇನ್ನೂ ತೀವ್ರವಾಗುತ್ತೆ ಅಂತ ಇಸ್ರೇಲ್‌ನ ಸೇನೆ ತಿಳಿಸಿದೆ. ಈ ಮೂಲಕ ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಮಾತುಕತೆಗೆ ಮತ್ತೆ ಅರ್ಥವಿಲ್ಲದಂತಾಗಿದೆ. ಯಾಕಂದ್ರೆ ಇತ್ತೀಚಿಗಷ್ಟೇ ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ಅಮೆರಿಕ ಕತಾರ್‌ ಮಧ್ಯೆಸ್ಥಿಕೆಯಲ್ಲಿ ಮಾತುಕತೆ ನಡೀತಾ ಇತ್ತು, ಸೋ ಎಲ್ಲಾ ಅಂತ್ಯವಾಗುತ್ತೆ ಅನ್ನೋ ವಾತವರಣವೂ ಇತ್ತು. ಆದ್ರೆ ಈಗ ಅದೆಲ್ಲಾ ಮುರಿದುಬಿದ್ದಂತಾಗಿದೆ. ಈ ನಡುವೆ ಇಸ್ರೇಲ್‌ ಮೇಲೆ ಅಂತರಾಷ್ಟ್ರೀಯ ಒತ್ತಡಕ್ಕೆ ಸಂಬಂಧಪಟ್ಟಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅತ್ಯಂತ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ . ʻʻಇಸ್ರೇಲ್‌ ದೇಶ ಒಂದೇ ಎಲ್ಲವನ್ನೂ ಫೇಸ್‌ ಮಾಡುತ್ತೆ. ನಾವು ಏಕಾಂಗಿಯಾಗೇ ಹೋರಾಡ್ತೀವಿ. ನಮ್ಮನ್ನ ತಡಿಯೋಕೆ ಯಾರಿಂದಲೂ ಸಾಧ್ಯವಿಲ್ಲ…ಎರಡನೇ ಮಹಾಯುದ್ದದ ಟೈಮಲ್ಲಿ ಯಾರೂ ಕೂಡ ನಮ್ಮನ್ನ ಕಾಪಾಡಲಿಲ್ಲ. ನಾಜಿಗಳು ನಮ್ಮ 60 ಲಕ್ಷ ಯಹೂದಿಗಳನ್ನ ಹತ್ಯೆ ಮಾಡಿದ್ರು. ನಾನು ಈ ಜಗತ್ತಿನ ಎಲ್ಲಾ ನಾಯಕರಿಗೂ ಒಂದು ಹೇಳೋಕೆ ಬಯಸ್ತೀನಿ. ನಮ್ಮ ಮೇಲೆ ಒತ್ತಡ ಹಾಕಿದ್ರೆ ಅದರಿಂದ ಯಾವುದೇ ಪ್ರಯೋಜನೆ ಇಲ್ಲ. ಯಾವುದೇ ಇಂಟರ್‌ನ್ಯಾಷನಲ್‌ಕಮ್ಯುನಿಟಿ ಕೂಡ ಇಸ್ರೇಲ್‌ ತನ್ನನ್ನ ತಾನು ರಕ್ಷಣೆ ಮಾಡ್ಕೋಳ್ಳೋದನ್ನ ತಡಿಯೋಕೆ ಸಾಧ್ಯವೇ ಇಲ್ಲ ಅಂತ ಹೇಳಿದ್ದಾರೆ. ಮತ್ತೊಂದೆಡೆ ಇಸ್ರೇಲ್‌ನಲ್ಲಿ ಕತಾರ್‌ನ ಖ್ಯಾತ ಸುದ್ದಿ ವಾಹಿನಿ ಅಲ್‌ ಜಜೀರಾವನ್ನ ಬ್ಯಾನ್‌ ಮಾಡಿರೋ ನಿರ್ಧಾರವನ್ನ ಇಸ್ರೇಲ್‌ ಕಾರ್ಯಗತಗೊಳಿಸಿದೆ. ಜೆರುಸಲಮ್‌ನ ಹೊಟೇಲ್‌ ರೂಮ್‌ ಒಂದ್ರಲ್ಲಿದ್ದ ಅಲ್‌ ಜಜೀರಾ ಆಫೀಸ್‌ ಮೇಲೆ ಇಸ್ರೇಲ್‌ ಅಧಿಕಾರಿಗಳು ದಾಳಿ ನಡೆಸಿ ಆ ಚಾನೆಲ್‌ನ್ನ ಬಂದ್‌ ಮಾಡಿದ್ದಾರೆ. ಈ ವಿಚಾರವಾಗಿ ರಿಯಾಕ್ಟ್‌ ಮಾಡಿರೋ ಅಲ್‌ಜಜೀರಾ ಇದು ಇಸ್ರೇಲ್‌ನ ಕ್ರಿಮಿನಲ್‌ ಆಕ್ಷನ್‌ ಅಂತೇಳಿದೆ. ಅಲ್ದೇ ನಮ್ಮ ನೆಟ್‌ವರ್ಕ್‌ ಮೇಲೆ ಇಸ್ರೇಲ್‌ ಬೆದರಿಕೆ ಒಡ್ಡಿದೆ ಅಂತ ಆರೋಪಿಸಿದೆ. ಇನ್ನು ಯುದ್ದ ಶುರುವಾದಾಗನಿಂದ ಇಲ್ಲಿತನಕ ಗಾಜಾದ ರಫಾದಿಂದ 1 ಲಕ್ಷ ಜನರನ್ನ ಸ್ಥಳಾಂತರ ಮಾಡಿದ್ದೇವೆ ಅಂತ ಇಸ್ರೇಲ್‌ ಹೇಳಿದೆ. . ಅತ್ತ ಉತ್ತರ ಇಸ್ರೇಲ್‌ ಭಾಗದಲ್ಲಿ ಕೂಡ ಹೆಜ್ಬೊಲ್ಲಾ ಇಸ್ರೇಲ್ ಕಾದಾಟ ಮುಂದುವರೆದಿದೆ. ಹೆಜ್ಬೊಲ್ಲಗಳ ಮೇಲೆ ಇಸ್ರೇಲ್‌ ದಾಳಿ ನಡಸಿದ್ದು ಒಂದೇ ಕುಟುಂಬದ ಮಹಿಳೆಯರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ ಅಂತ ಹೆಜ್ಬೊಲ್ಲಾ ಆರೋಪ ಮಾಡಿದೆ. ಇದಕ್ಕೆ ಪ್ರತಿಯಾಗಿ ನಾವೂ ರಾಕೆಟ್‌ ಹಾರಿಸಿದ್ದೀವಿ ಅಂತ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply