ಅಮೆರಿಕವನ್ನ ತೀವ್ರ ತರಾಟೆಗೆ ತಗೊಂಡ ಎಸ್‌ ಜೈಶಂಕರ್‌!

masthmagaa.com:

ಅಮೆರಿಕದಲ್ಲಿ ನಡೀತಿರೋ ಪಾಲೇಸ್ತೇನ್‌ ಪರ ಪ್ರತಿಭಟನೆಗಳ ವಿಚಾರವಾಗಿ ಜೈಶಂಕರ್‌ ಮಾತಾಡಿದ್ದಾರೆ. ಭಾರತದಲ್ಲಿ ಪ್ರತಿ ಬಾರಿ ಹೋರಾಟ ನಡೆದಾಗ ಸಾರ್ವಜನಿಕರೊಂದಿಗೆ ಸರ್ಕಾರಗಳು ಹೇಗೆ ವ್ಯವಹರಿಸಬೇಕು ಅಂತ ನಮಗೆ ಸಾಕಷ್ಟು ಉಪದೇಶ ಬರುತ್ತೆ. ಆದ್ರೆ ಇವತ್ತು ಟಿವಿಯಲ್ಲಿ ದೃಶ್ಯಗಳನ್ಬ ನೋಡಬೇಕು . ಆ ಪ್ರತಿಭಟನೆ ತಡೆಯೋಕೆ ಅವರು ಏನ್‌ ಮಾಡ್ತಾರೆ, ಅದಕ್ಕೆ ಅವರು ಏನ್‌ ಹೇಳ್ತಾರೆ, ಅವರ ಕೆಲಸ ಕಾರ್ಯದ ಬಗ್ಗೆ ಚೂರು ನೋಡಬೇಕು… ಅಂತ ಅಮೆರಿಕವನ್ನ ಕಿಚಾಯಿಸಿದ್ದಾರೆ. ಅಂದ್ಹಾಗೆ ಅಮೆರಿಕದಲ್ಲಿ ಪಾಲೇಸ್ತೇನ್‌ ಪರ ಪ್ರತಿಭಟನೆಗಳನ್ನ ಅಲ್ಲಿನ ಬೈಡೆನ್‌ ಸರ್ಕಾರ ಪೊಲೀಸರನ್ನ ಬಿಟ್ಟು ಹತ್ತಿಕ್ಕುತ್ತಿದೆ. ಸೋ ಅದೇ ನಮ್ಮಲ್ಲಾಗಿದ್ರೆ ಅದು ವಾಕ್‌ ಸ್ವಾತಂತ್ರ ಅಂತ ಅವರು ಬಾಯಿ ಬಡ್ಕೋತಿದ್ರು, ಆದ್ರೆ ಈಗ ಅವರ ಮಾತಲ್ಲಿ ತುಂಬಾ ಚೇಂಜಸ್‌ ಆಗಿದೆ ಅನ್ನೋ ಅರ್ಥದಲ್ಲಿ ಜೈಶಂಕರ್‌ ಅಮೆರಿಕವನ್ನ ತರಾಟೆಗೆ ತಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply