ಜಾರ್ಖಂಡ್‌ ಸಚಿವರ ಮನೆ ಮೇಲೆ ED ದಾಳಿ: 25 ಕೋಟಿ ರೂ. ವಶ!

masthmagaa.com:

ಜಾರ್ಖಂಡ್‌ನಲ್ಲಿ ಇ.ಡಿ ತಮ್ಮ ಕಾರ್ಯಾಚರಣೆಯನ್ನ ಮುಂದುವರೆಸಿದೆ. ಈಗ ರಾಂಚಿಯಲ್ಲಿರೊ ಜಾರ್ಖಂಡ್‌ ಸಚಿವ ಅಲಂಗೀರ್‌ ಅವ್ರ ಆಪ್ತ ಕಾರ್ಯದರ್ಶಿ ಸಂಜೀವ್‌ ಲಾಲ್‌ ಅವ್ರ ಮನೆ ಮೇಲೆ ಮತ್ತು ಸಂಜೀವ್‌ ಅವರ ಮನೆ ಕೆಲಸದವರ ಮನೆ ಮೇಲೆ ED ಅಧಿಕಾರಿಗಳು ರೇಡ್ ಮಾಡಿದ್ದಾರೆ. ಈ ವೇಳೆ ಸಂಜೀವ್‌ ಮನೆಗೆಲಸದವ್ರ ಮನೆಯಲ್ಲಿ ಸುಮಾರು 25 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ. ಅಂದ್ಹಾಗೆ ಜಾರ್ಖಂಡ್ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಕೆಲವು ಯೋಜನೆಗಳ ಅನುಷ್ಠಾನದ ವೇಳೆ ಅಕ್ರಮ ನಡೆದಿವೆ ಅಂತ ಈ ಹಿಂದೆ ಮುಖ್ಯ ಎಂಜಿನಿಯರ್ ವೀರೇಂದ್ರ ಕೆ ರಾಮ್ ಅವರನ್ನು ಬಂಧಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಈ ದಾಳಿಗಳು ನಡೆದಿವೆ. ಅಂದ್ಹಾಗೆ 70 ವರ್ಷದ ಕಾಂಗ್ರೆಸ್ ನಾಯಕ ಅಲಂಗೀರ್ ಅಲಂ ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದ ಈ ದಾಳಿಯು ರಾಜಕೀಯ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ.

-masthmagaa.com

Contact Us for Advertisement

Leave a Reply