ಚೀನಾದಲ್ಲಿ ನಿರಂತರ ಮಳೆ! 1,700ಕ್ಕೂ ಅಧಿಕ ಜನರ ಸ್ಥಳಾಂತರ!

masthmagaa.com:

ಬಿಟ್ಟುಬಿಡದೇ ಸುರೀತಿರೋ ಆಲಿಕಲ್ಲು ಮಳೆ ಮತ್ತು ಬಿರುಸಾದ ಗಾಳಿಯಿಂದಾಗಿ ಚೀನಾದ ದಕ್ಷಿಣ ಭಾಗದಲ್ಲಿ ದೊಡ್ಡ ಅನಾಹುತವೇ ಸೃಷ್ಟಿಯಾಗ್ತಿದೆ. ಅಲ್ಲಿನ ಶಾವೊಗುವಾನ್‌ ಪ್ರಾಂತ್ಯದಲ್ಲಿ ವಿದ್ಯುತ್‌ ಸಂಪರ್ಕ, ಟೆಲಿಫೋನ್‌ ನೆಟ್‌ವರ್ಕ್‌ಗಳು ಕಡಿತಗೊಂಡಿವೆ. ಜೊತೆಗೆ ಭೂಕುಸಿತ ಉಂಟಾಗಿ ಮನೆಗಳು ಮುಳುಗಡೆಯಾಗಿ…ಸೇತುವೆಗಳು ನಾಶವಾಗಿವೆ ಅಂತ ಚೀನಾ ಮಾಧ್ಯಮಗಳು ವರದಿ ಮಾಡಿವೆ. ಅಲ್ದೆ ಜನರ ರಕ್ಷಣೆಗಾಗಿ ಬಸ್‌ ಮತ್ತು ಹೆಲಿಕಾಪ್ಟರ್‌ಗಳನ್ನ ಕಳಿಸಲಾಗ್ತದೆ. ಇನ್ನು ಗುವಾಂಗ್‌ಡಾಂಗ್‌ ಅನ್ನೋ ಪ್ರಾಂತ್ಯದಲ್ಲಿ 1,700ಕ್ಕೂ ಅಧಿಕ ಜನರನ್ನ ಸೇಫ್‌ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

-masthmagaa.com

Contact Us for Advertisement

Leave a Reply