ವೇತನ ಪಾವತಿಗೆ ಆಗ್ರಹಿಸಿ ಮುಷ್ಕರ ನಡೆಸಿದ 108 ಯೋಜನೆಯ ಸಿಬ್ಬಂದಿ!

masthmagaa.com:

ಬಾಕಿ ವೇತನ ಪಾವತಿಸುವಂತೆ ಆಗ್ರಹಿಸುವಂತೆ ಆಗ್ರಹಿಸಿ ಅಂಬುಲೆನ್ಸ್‌ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದಾರೆ. 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯ ನಿರ್ವಹಿಸ್ತಿರೊ ಸಿಬ್ಬಂದಿ ಅನಿರ್ಧಿಷ್ಟಾವಧಿಗೆ ಈ ಸ್ಟ್ರೈಕ್‌ ನಡೆಸ್ತಿದ್ದಾರೆ. ತಮಗೆ ನಿಗದಿ ಪಡಿಸಿದ ವೇತನದಲ್ಲಿ ಕಳೆದ 3 ತಿಂಗಳಿಂದ ಸರ್ಕಾರ ವೇತನ ಪಾವತಿಸಿಲ್ಲ. ಹೀಗಾಗಿ ವೇತನ ಪಾವತಿಸೊವರೆಗೆ ಸೋಮವಾರ ಸಂಜೆ 6ರಿಂದ ಹಮ್ಮಿಕೊಂಡ ಈ ಮುಷ್ಕರವನ್ನ ಕೈಬಿಡೊಲ್ಲ ಅಂತ ಸಿಬ್ಬಂದಿಗಳು ಹೇಳ್ತಿದ್ದಾರೆ. ಇದ್ರಿಂದಾಗಿ ಅಂಬ್ಯುಲೆನ್ಸ್‌ ಸೇವೆಯಲ್ಲಿ ವ್ಯತ್ಯಯವಾಗೊ ಸಾಧ್ಯತೆ ಹೆಚ್ಚಿದೆ ಅಂತ ಹೇಳಲಾಗ್ತಿದೆ. ಇನ್ನು ಈ ಕುರಿತು ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದ್ದು, ʻʻಸರ್ಕಾರ ಅಂಬುಲೆನ್ಸ್‌ ಸಿಬ್ಬಂದಿಗಳನ್ನ ಬೀದಿಗೆ ತಂದಿದೆ. ಖಜಾನೆ ಖಾಲಿ ಮಾಡಿ ಕೂತಿರುವ ಎಟಿಎಂ ಸರ್ಕಾರ ಕೂಡಲೇ ಅವರಿಗೆ ಸಂಬಳ ನೀಡಬೇಕು ಅಂತ ಒತ್ತಾಯ ಮಾಡಿದೆ.

-masthmagaa.com

Contact Us for Advertisement

Leave a Reply