ಪ್ರಜ್ವಲ್‌ರ ವೀಡಿಯೋಗಳನ್ನ ಹಂಚಿ ಕೊಂಡರೆ ಕೇಸ್‌ ದಾಖಲು: SIT!

masthmagaa.com:

ದೇಶದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿರೊ ಪ್ರಜ್ವಲ್‌ ರೇವಣ್ಣರ ಪೆನ್‌ಡ್ರೈವ್‌ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ಆಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳೊದು ಶಿಕ್ಷಾರ್ಹ ಅಪರಾಧ ಅಂತ ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಇಂಥವರ ವಿರುದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕೇಸ್‌ ದಾಖಲಿಸಲಾಗುವುದು ಅಂತ SIT ಎಚ್ಚರಿಕೆ ನೀಡಿದೆ.. ಇನ್ನು ಈ ಕೇಸ್‌ ನಂತ್ರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನ ಹತ್ತಿಕ್ಕಲ್ಲು ಸಂತ್ರಸ್ಥೆಯರ ನೆರವಿಗಾಗಿ ವಿಶೇಷ ತನಿಖಾ ದಳ ಸಹಾಯವಾಣಿಯೊಂದನ್ನ ತೆರೆದಿದೆ. ಈ ಸಂಬಂಧ ಸಾರ್ವಜನಿಕರು 6360-938947 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅತ್ತ ಕಿಡ್ಯಾಪ್‌ ಕೇಸ್‌ನಲ್ಲಿ ಅರೆಸ್ಟ್‌ ಆಗಿರೋ ಶಾಸಕ HD ರೇವಣ್ಣ ಅವ್ರನ್ನ SIT ಅಧಿಕಾರಿಗಳು ಮೇ 8ರವೆಗೆ ಕಸ್ಟಡಿಗೆ ಪಡೆದಿದ್ದಾರೆ. ಜೊತೆಗೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಕೇಸ್‌ಗಳ ತನಿಖೆ ನಡೆಸ್ತಿರೊ SIT ಅಧಿಕಾರಿಗಳು ಬಸವನಗುಡಿಯಲ್ಲಿರೊ ರೇವಣ್ಣರ ಮನೆಗೆ ಸಂತ್ರಸ್ಥೆಯನ್ನ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಈ ನಡುವೆ ರೇವಣ್ಣ ಅವ್ರ ಬಂಧನವಾಗಿದ್ದು ಸರಿಯಾದ ಕ್ರಮ ಅಂತ ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ. ಅಲ್ದೇ ಪ್ರಜ್ವಲ್‌ ರೇವಣ್ಣ ಈಗ್ಲೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಸಂಸದರಾಗೆ ಇದ್ದಾರೆ. ಎಲೆಕ್ಷನ್‌ನಲ್ಲಿ ಗೆದ್ರೆ ಮಾತ್ರ NDA ಕೂಟದ ಸಂಸದರಾಗ್ತಾರೆ ಅಂತ ತಿಳಿಸಿದ್ದಾರೆ. ಇನ್ನು ಪ್ರಜ್ವಲ್‌ರ ಈ ಪೆನ್‌ಡ್ರೈವ್‌ ಕೇಸ್‌ನಲ್ಲಿ ಮಾಜಿ ಪ್ರಧಾನಿ HD ದೇವೇಗೌಡ ಹಾಗೂ ಮಾಜಿ ಸಿಎಂ HD ಕುಮಾರಸ್ವಾಮಿ ಅವ್ರ ಹೆಸರನ್ನ ಉಲ್ಲೇಖ ಮಾಡಬಾರದು ಅಂತ ಕೋರ್ಟ್‌ ಹೇಳಿದೆ. ಈ ವಿಚಾರವಾಗಿ ಕೋರ್ಟ್‌ನಿಂದ ಕುಮಾರಸ್ವಾಮಿ ಹಾಗೂ ದೇವೇಗೌಡರಿಬ್ರು ತಡೆಯಾಜ್ಞೆ ತಂದಿದ್ದಾರೆ. ಕುಮಾರಸ್ವಾಮಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಬಾರದು. ಸತ್ಯಾಂಶ ಇದ್ದು, ಸಾಕ್ಷ್ಯಗಳಿದ್ದರೆ ಮಾತ್ರ ಸುದ್ದಿ ಪ್ರಸಾರ ಮಾಡಬಹುದು ಅಂತ ಬೆಂಗಳೂರಿನ 34ನೇ ಸಿಟಿ ಸಿವಿಲ್ ಕೋರ್ಟ್ ಮಹತ್ವದ​ ಆದೇಶ ಹೊರಡಿಸಿದೆ.

-masthmagaa.com

Contact Us for Advertisement

Leave a Reply