ಟೆರರ್ ಫಂಡಿಂಗ್‌ ಆರೋಪ: ದಿಲ್ಲಿಯಲ್ಲಿ ಸಿಎಂ, ರಾಜ್ಯಪಾಲರ ಮಧ್ಯೆ ಕುಸ್ತಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಟೆರರ್ ಫಂಡಿಂಗ್‌ ಆರೋಪದಲ್ಲಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ದ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಗೃಹ ಇಲಾಖೆಗೆ ಕಂಪ್ಲೇಟ್‌ ಕೊಟ್ಟಿದ್ದಾರೆ. ಕೇಜ್ರಿವಾಲ್‌ ನೇತೃತ್ವ ಆಮ್‌ ಆದ್ಮಿ ಪಾರ್ಟಿ ಉಗ್ರರಿಂದ ಹಣ ಪಡೆದಿದೆ. ಭಾರತದಲ್ಲಿ ಬ್ಯಾನ್‌ ಆಗಿರೋ ಖಲಿಸ್ತಾನಿ ಉಗ್ರಸಂಘಟನೆ, ಸಿಖ್‌ ಫಾರ್‌ ಜಸ್ಟೀಸ್‌ನಿಂದ ಆಪ್‌ಗೆ ಪೊಲಿಟಿಕಲ್ ಫಂಡ್‌ ಬಂದಿದೆ.‌ ಕೂಡಲೇ ಅವರ ವಿರುದ್ದ ರಾಷ್ಟ್ರೀಯ ತನಿಖಾದಳ ತನಿಖೆ ನಡೆಸಬೇಕು ಅಂತ ಪತ್ರ ಬರೆಯಲಾಗಿದೆ. ʻ2014ರಿಂದ 2022ರ ನಡುವೆ ಸುಮಾರು 16 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 132 ಕೋಟಿ ರೂಪಾಯಿಯನ್ನ ರಿಸೀವ್‌ ಮಾಡ್ಕೊಂಡಿದೆ. ದೂರಿನಲ್ಲಿ ಸಲ್ಲಿಸಲಾದ ವಿಷಯದ ಸೂಕ್ಷ್ಮತೆ ಮತ್ತು ಸೀರಿಯಸ್‌ನೆಸ್‌ನ್ನ ಗಮನದಲ್ಲಿಟ್ಟುಕೊಂಡು ಗೃಹ ಇಲಾಖೆ ತನಿಖೆಗೆ ಆದೇಶ ಮಾಡಬೇಕು.ಕೇಜ್ರಿವಾಲ್‌ ನ್ಯೂಯಾರ್ಕ್‌ನಲ್ಲಿ ಫ್ರೊ ಖಲಿಸ್ತಾನಿಗಳನ್ನ ಮೀಟ್‌ ಮಾಡಿ ಬಂದಿದ್ದಾರೆ. ಖಲಿಸ್ತಾನಿ ಉಗ್ರ ದೇವೇಂದ್ರ ಪಾಲ್‌ ಭುಲ್ಲಾರ್‌ನನ್ನ ಬಿಡುಗಡೆ ಮಾಡಿಸೋಕೆ ನಾನು ಹೆಲ್ಪ್‌ ಮಾಡ್ತೀನಿ ಅಂತ ಕೇಜ್ರಿವಾಲ್‌ ಹೇಳಿದ್ದಾರೆ ಅಂತ ಗೃಹ ಇಲಾಖೆಗೆ ಪತ್ರಬರೆಯಲಾಗಿದೆ.

-masthmagaa.com

Contact Us for Advertisement

Leave a Reply